KICHCHA SUDEEP 100 DAYS KANNADA MOVIES
KICHCHA SUDEEP 100 DAYS KANNADA MOVIES ಕರುನಾಡಿನಲ್ಲಿ ಕಿಚ್ಚ ಎಂದು ಹೆಸರು ಕೇಳುತ್ತಲೇ ನಮ್ಮ ಮನದಲ್ಲಿ ನೆನಪಾಗೋರೆ “Sudeep”. ಇಂದು ಸುದೀಪ್ ರವರು ಅಭಿನಯಿಸಿ ಹೆಚ್ಚು success ಕಂಡ ಚಿತ್ರಗಳ ಬಗ್ಗೆ ತಿಳಿಯೋಣ ಬನ್ನಿ.
KICHCHA SUDEEP 100 DAYS KANNADA MOVIES
ಸ್ಪರ್ಶ
ಸುದೀಪ್ ರವರ ಮುಖ್ಯ ಪಾತ್ರದ ಚೋಚ್ಚಲ ಅಭಿನಯ ಚಿತ್ರವೆಂದರೆ ” ಸ್ಪರ್ಶ “. ಈ ಚಿತ್ರವನ್ನ ಸುನಿಲ್ ಕುಮಾರ್ ದೇಸಾಯಿ ಯವರು ಬರೆದು, ನಿರ್ದೇಶನ ಮಾಡಿ 2000 ದಲ್ಲಿ ತೆರೆಕಂಡು ಶತದೀನೋತ್ಸವ ಆಚರಿಸಿತು. ಇದು ಸುದೀಪ್ ರವರ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರ. ರೇಖಾ ಮತ್ತು ಸುಧಾರಾಣಿ, ಸುದೀಪ್ ರವರ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಹುಚ್ಚ
/2001, ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ತೆರೆ ಕಂಡ ಚಿತ್ರವೇ ” ಹುಚ್ಚ “. ಈ ಚಿತ್ರಕ್ಕೆ ಸುದೀಪ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದಲ್ಲದೆ, ಹುಚ್ಚ ಚಿತ್ರವು ಸುದೀಪ್ ರವರಿಗೆ ಒಂದೊಳ್ಳೆ ಬ್ರೇಕ್ ಕೊಟ್ಟು, ಶತದೀನೋತ್ಸವ ಆಚರಿಸಿತು. ಹುಚ್ಚ ಚಿತ್ರದ script ಅನ್ನಾ ಮೊದಲಿಗೆ ಉಪೇಂದ್ರ ಮತ್ತು ಶಿವಣ್ಣ ನವರು reject ಮಾಡಿದ್ದರು. ಇದು ತಮಿಳಿನ ” Sethu” ಚಿತ್ರದ ರಿಮೇಕ್. ರಾಜೇಶ್ ರಾಮನಾಥ್ ರವರು ಈ ಚಿತ್ರಕ್ಕೆ ಸಂಗೀತಾ ಸಂಯೋಜನೆ ಮಾಡಿದ್ದಾರೆ.
ಸ್ವಾತಿ ಮುತ್ತು
ಸುದೀಪ್ ರವರ ವಿಭಿನ್ನ ರೀತೀಯ ನಟನೆಯಲ್ಲಿ ತೆರೆ ಕಂಡ ಮತ್ತೊಂದು ಚಿತ್ರವೇ ” ಸ್ವಾತಿ ಮುತ್ತು “. ಕಮಲಾಸನ್ ಅಭಿನಯದ Cult, Classic ಸಿನಿಮವಾದ ತೆಲುಗಿನ ” ಸ್ವಾತಿ ಮುತ್ಯಂ ” ಚಿತ್ರದ ರಿಮೇಕ್. D ರಾಜೇಂದ್ರ ಬಾಬು ರವರ ನಿರ್ದೇಶನದಲ್ಲಿ 2003 ರ ರಲ್ಲಿ ತೆರೆ ಕಂಡಂತಹ ಚಿತ್ರ. ಸುದೀಪ್ ರವರ ಹೋಂ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣಗೊಂಡು, Filmfare Award South ನಲ್ಲಿ ಅತ್ಯುತ್ತಮ ನಟ ಮತ್ತು ಮೀನಾ ರವರಿಗೆ ಅತ್ಯುತ್ತಮ ನಟಿ ಎಂದು ಗುರುತಿಸಿ ಪ್ರಶಸ್ತಿಪ್ರಧಾನ ಮಾಡಲಾಯಿತು.
My Autograph
ಈ ಚಿತ್ರವನ್ನ ಸುದೀಪ್ ರವರು ಮೊದಲನೇ ಬಾರಿಗೆ ನಿರ್ದೇಶನ ಮಾಡಿದರು. ತಮ್ಮ ಸ್ವಂತ ನಿರ್ಮಾಣದ “ಕಿಚ್ಚಾ ಕ್ರಿಯೇಷನ್ಸ್” ಸಂಸ್ಥೆಯಲ್ಲಿ ತಯಾರಾಗಿ, 2006 ರಲ್ಲಿ ತೆರೆಕಂಡು, ಕರ್ನಾಟಕದ ಅಲವು ಚಿತ್ರಮಂದಿರಗಳಲ್ಲಿ 175 ದಿನಗಳ ಕಾಲ ಪ್ರದರ್ಶನ ಕಂಡ ಚಿತ್ರ. ಈ ಚಿತ್ರವು ತಮಿಳಿನ ಆಟೋಗ್ರಾಫ್ ಸಿನಿಮಾದ ರಿಮೇಕ್. ಭರತ್ವಜ್ ಈ ಚಿತ್ರದ ಹಾಡುಗಳಿಗೆ ಸಂಗೀತಾ ನೀಡಿದವರು ಹಾಗೂ ಚಿತ್ರದ ಹಿನ್ನೆಲೆ ಸಂಗೀತವನ್ನ ರಾಜೇಶ್ ರಾಮನಾಥ್ ನಿರ್ದೇಶನ ಮಾಡಿದ್ದಾರೆ. “ಅರಳುವ ಹೂವ್ವುಗಳೇ” ಹಾಡಿಗಾಗಿ K S ಚಿತ್ರ ರವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನ Filmfare Award South ನೀಡಿತು.
KICHCHA SUDEEP 100 DAYS KANNADA MOVIES
Phoonk
ಹಿಂದಿ ಭಾಷೆಯಲ್ಲಿ ರಾಮ್ ಗೋಪಾಲ್ Verma ನಿರ್ದೇಶಿಸಿದ Horror ಸಿನಿಮಾನೆ ” Phoonk”.2008 ಸುದೀಪ್ ರವರು ಮೊದಲ ಬಾರಿಗೆ ಬಾಲಿವುಡ್ ನಲ್ಲೂ ತಮ್ಮ ನಟನೆಯನ್ನ ಪ್ರಾರಂಭಿಸಿದ ಚಿತ್ರ. ಬಾಕ್ಸ್ ಆಫೀಸ್ ನಲ್ಲಿ 10 ಕೋಟಿ ಕಲೆಕ್ಷನ್ ಗಳಿಸಿ, blockbuster ಎಂದೇ ಹೆಸರು ಮಾಡಿ, ತಮಿಳು ಮತ್ತು ತೆಲುಗಿನಲ್ಲೂ ರಿಮೇಕ್ ಮಾಡಲಾಯಿತು.
ವೀರ ಮದಕರಿ
ಸುದೀಪ್ ರವರು ನಿರ್ದೇಶಿಸಿದ ಮತ್ತೊಂದು ಚಿತ್ರವೇ ” ವೀರ ಮದಕರಿ “. ಈ ಚಿತ್ರದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಹಾಗೇ ಇವರಿಗೆ ಜೋಡಿಯಾಗಿ ರಾಗಿಣಿ ದ್ವಿವೇದಿ ಮೊದಲ ಬಾರಿ ಕನ್ನಡ ಚಿತ್ರ ರಂಗಕ್ಕೆ Entry ಕೊಟ್ಟರು. ವೀರ ಮದಕರಿ ಚಿತ್ರವು ತೆಲುಗಿನ ” Vikramarkudu ” ಸಿನಿಮಾದ ರಿಮೇಕ್. 2009 ರಲ್ಲಿ ತೆರೆಗೆ ಬಂದು 100 ದಿನಗಳ ಪ್ರದರ್ಶನ ಕಂಡು, ಅಲವು ಪ್ರಶಸ್ತಿಗೆ ಪಾತ್ರವಾಯಿತು.
ಕೆಂಪೇಗೌಡ
2011 ರಲ್ಲಿ ಸುದೀಪ್ ನಿರ್ದೇಶನದ, ಶಂಕರ್ ಗೌಡ ನಿರ್ಮಾಣದಲ್ಲಿ ತೆರೆ ಕಂಡು, ಬಾಕ್ಸ್ ಆಫೀಸ್ ನಲ್ಲಿ ಹೆಸರು ಮಾಡಿದ ಚಿತ್ರ. ಸುದೀಪ್ ರವರಿಗೆ ಮತ್ತೊಮ್ಮೆ ಜೋಡಿಯಾಗಿ ರಾಗಿಣಿ ದ್ವಿವೇದಿ ನಟಿಸಿದ ಚಿತ್ರ. ತಮಿಳಿನಲ್ಲಿ ಹೆಸರು ಮಾಡಿದ “ಸಿಂಗಂ” ಚಿತ್ರದ ರಿಮೇಕ್. ಸಂಗೀತಾ ನಿರ್ದೇಶನ ಮಾಡಿದವರು ಅರ್ಜುನ್ ಜನ್ಯ. ರವಿ ಶಂಕರ್ ರವರಿಗೆ ಅತ್ಯುತ್ತಮ ಖಳ ನಟ ಪ್ರಶಸ್ತಿ ತಂದು ಕೊಟ್ಟು ಸ್ಯಾಂಡಲ್ವುಡ್ ನಲ್ಲಿ ಚಿರಪರಿಚಿತರಾದರು.
ವಿಷ್ಣುವರ್ಧನ
2011 ರಲ್ಲಿ ತೆರೆ ಕಂಡ ಸುದೀಪ್ ನಟನೆಯ ಮತ್ತೊಂದು ಚಿತ್ರ ” ವಿಷ್ಣುವರ್ಧನ”. ದ್ವಾರಕೇಶ್ ನಿರ್ಮಾಣದ, P ಕುಮಾರ್ ನಿರ್ದೇಶನದಡಿಯಲ್ಲಿ ಮೂಡಿ ಬಂದು ಎಲ್ಲಾ ರೀತಿಯಲ್ಲೂ ಹೆಸರು ಮಾಡಿದ ಚಿತ್ರ. ಈ ಚಿತ್ರವು South Korea ದ ” Handphone ” ಚಿತ್ರದ ಭಾಗಶಃ ಸ್ಫೂರ್ತಿದಾಯಕವಾಗಿದೆ. ವಿಷ್ಣುವರ್ಧನ ಚಿತ್ರವನ್ನ ಬೆಂಗಾಳಿ ಯಲ್ಲಿ ರಿಮೇಕ್ ಮಾಡಲಾಗಿದೆ. ಈ ಚಿತ್ರಕ್ಕೆ ಸಂಗೀತಾ ಕೊಟ್ಟವರು V ಹರಿಕೃಷ್ಣ ರವರು.
ಈಗಾ
S S ರಾಜಮೌಳಿ ಯವರ ತೆಲುಗು ನಿರ್ದೇಶನದಲ್ಲಿ ಮೂಡಿ ಬಂದು ಎಲ್ಲರ ಗಮನ ಸೆಳೆದ ಚಿತ್ರ “ಈಗಾ”. ಈ ಚಿತ್ರದಲ್ಲಿ ಸುದೀಪ್ ರವರು complete ಖಳನಟನಾಗಿ ನಟಿಸಿ ಮಿಂಚಿ, ಅತ್ಯುತ್ತಮ ಖಳ ನಟ ಪ್ರಶಸ್ತಿ ಕೂಡ ಪಡೆದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರು. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಗಳಿಸಿದ ಚಿತ್ರ. “ಈಗಾ” ಮೊದಲ ತೆಲುಗು ಸಿನಿಮಾ ಆಫ್ರಿಕಾ ಭಾಷೆ “ಸ್ವಹಿಲಿ” ಯಲ್ಲಿ ಡಬ್ ಮಾಡಿ ಆಫ್ರಿಕಾ ದೇಶಗಳಲ್ಲಿ ಬಿಡುಗಡೆಗೊಂಡ ಚಿತ್ರ.
ವರದನಾಯಕ
2013 ರಲ್ಲಿ ಮತ್ತೆ ಸುದೀಪ್ ರವರು ಶಂಕರ್ ಗೌಡ ನಿರ್ಮಾಣದ, ಅಯ್ಯಪ್ಪ P ಶರ್ಮ ನಿರ್ದೇಶನದಡಿಯಲ್ಲಿ ತೆರೆ ಕಂಡ ಚಿತ್ರ ವೇ ” ವರದನಾಯಕ “. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ರವರು ಮೊದಲ ಬಾರಿಗೆ ಸುದೀಪ್ ತಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಇದು ತೆಲುಗು ಸಿನಿಮಾ “Lakshyam” ಚಿತ್ರದ ರಿಮೇಕ್. ರಿಲೀಸ್ ಗೂ ಮುನ್ನ 10.5 ಕೋಟಿ business ಮಾಡಿದ ಚಿತ್ರ. ಅರ್ಜುನ್ ಜನ್ಯ ರವರ ಸಂಗೀತಾ ಹಾಗೇ ಈ ಚಿತ್ರದಲ್ಲಿ ಇವರೇ ಒಂದು ಹಾಡನ್ನ ಹಾಡಿ ಅತ್ಯುತ್ತಮ ಹಿನ್ನೆಲೆ ಗಾಯಕನೆಂಬ ಪ್ರಶಸ್ತಿ ಪಡೆದರು.
ಬಚ್ಚನ್
ಮೊದಲ ಬಾರಿಗೆ ನಿರ್ದೇಶಕ ಶಶಾಂಕ್ ರವರು ಸುದೀಪ್ ರವರಿಗೆ ನಿರ್ದೇಶನ ಮಾಡಿದ ಚಿತ್ರವೇ ” ಬಚ್ಚನ್ “. ಇದು 2013 ರಲ್ಲಿ ತೆರೆಕಂಡು, ಸುದೀಪ್ ರವರ ವಿಭಿನ್ನ ನಟನೆಯಿಂದ ಬಾಕ್ಸ್ ಆಫೀಸ್ ನಲ್ಲೂ ಹೆಸರು ಮಾಡಿ, ಕರ್ನಾಟಕದ 15 ಚಿತ್ರಮಂದಿರದಲ್ಲಿ 75 ದಿನಗಳ ಪ್ರದರ್ಶನ ಕಂಡ ಚಿತ್ರವಿದು. ಸುದೀಪ್ ರವರ ಜೋಡಿಯಾಗಿ ಭಾವನಾ ಮತ್ತು ಪಾರುಲ್ ಯಾದವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ V ಹರಿಕೃಷ್ಣ ರವರು ಸಂಗೀತಾ ಸಂಯೋಜನೆ ಮಾಡಿದ್ದಾರೆ.
ಮಾಣಿಕ್ಯ
ಬಚ್ಚನ್ ಚಿತ್ರದ success ನಿಂದ ಅಲವು ಬೇಡಿಕೆಗಳು ಬಂದರು, ಸುದೀಪ್ ಮತ್ತೊಂದು ನಿರ್ದೇಶನಕ್ಕೆ ಮುಂದಾಗುತ್ತಾರೆ. ಆ ಚಿತ್ರವೇ ” ಮಾಣಿಕ್ಯ”. ಈ ಚಿತ್ರಕ್ಕೆ ಮಾಣಿಕ್ಯ ಎಂದು ಹೆಸರನ್ನ ಸಲಹೆ ಕೋಟ್ಟವರು ಕನ್ನಡ ಚಿತ್ರರಂಗದಲ್ಲಿ ಕುಳ್ಳ ಎಂದೇ ಖ್ಯಾತಿ ಪಡೆದ ದ್ವಾರಕೇಶ್ ರವರು. N M ಕುಮಾರ್ ಮತ್ತು ಪ್ರಿಯಾ ಸುದೀಪ್ ನಿರ್ಮಾಣದಲ್ಲಿ 2014 ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ನಲ್ಲೂ ಹೆಸರು ಮಾಡಿದ ಚಿತ್ರ. ಇದು ತೆಲುಗು “Michi” ಸಿನಿಮಾದ ರಿಮೇಕ್. ಈ ಚಿತ್ರದಲ್ಲಿ ಮೊದಲನೇ ಬಾರಿಗೆ ರವಿಚಂದ್ರನ್ ರವರು ಸುದೀಪ್ ಗೆ ಅಪ್ಪನಾಗಿ ಕಾಣಿಸಿಕೊಂಡಿದ್ದಾರೆ.
ಕೋಟಿಗೊಬ್ಬ 2
Rockline ವೆಂಕಟೇಶ್ ನಿರ್ಮಾಣದಲ್ಲಿ ಸುದೀಪ್ ಮತ್ತು ನಿತ್ಯ ಮೆನೋನ್ ನಟನೆಯ ” ಕೋಟಿಗೊಬ್ಬ 2 ” ಚಿತ್ರವು 2016 ರಲ್ಲಿ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ತೆರೆ ಕಂಡು, ಬಾಕ್ಸ್ ಆಫೀಸ್ ನಲ್ಲೂ ಸದ್ದು ಮಾಡಿತು. K S ರವಿ ಕುಮಾರ್ ರವರು ನಿರ್ದೇಶಿಸಿದ ಒಂದೊಳ್ಳೆ Action, Comedy ಸಿನಿಮಾ. ಈ ಚಿತ್ರಕ್ಕೆ D Iman ರವರು ಸಂಗೀತಾ ನಿರ್ದೇಶನ ಮಾಡಿದ್ದಾರೆ. 9 ನೇ ಬೆಂಗಳೂರು ಇಂಟರ್ನ್ಯಾಷನಲ್ film festival ನಲ್ಲಿ Best Popular film ಪ್ರಶಸ್ತಿ ಗಿಟ್ಟಿಸಿದ ಚಿತ್ರ.
ಹೆಬ್ಬುಲಿ
ಇದು S ಕೃಷ್ಣ ರವರು ನಿರ್ದೇಶಿಸಿದ ಒಂದು Action ಚಿತ್ರ. ಸುದೀಪ್ ಮತ್ತು ರವಿಚಂದ್ರನ್ ರವರು ಜೋಡಿಯಾಗಿ ನಟಿಸಿದ ಎರಡನೇ ಚಿತ್ರ. ಸುದೀಪ್ ಗೆ ಜೋಡಿಯಾಗಿ ಮೊದಲನೆಯ ಬಾರಿ sandalwood ಗೆ ಕಾಲಿಟ್ಟ Amala Paul. 2017 ರಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೆಸರು ಮಾಡಿ, ಕರ್ನಾಟಕದ ಅಲವು ಕೇಂದ್ರಗಳಲ್ಲಿ 50 ದಿನಗಳ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿ ಸುದೀಪ್ ರವರ ವಿಭಿನ್ನ hairstyle ಕೂಡ ಎಲ್ಲಾ ಪಡ್ಡೆ ಹುಡುಗರ ಮನಸೆಳೆಸಿತು.
ಡಿ ಬಾಸ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಮಾಸ್ ಸಿನಿಮಾಗಳು Challenging Star Darshan 100 Days Movies KICHCHA SUDEEP 100 DAYS KANNADA MOVIES
ಪೈಲ್ವಾನ್
ಸುದೀಪ್ ರವರಿಗೆ S ಕೃಷ್ಣ ಮತ್ತೊಮ್ಮೆ ನಿರ್ದೇಶನ ಮಾಡಿದ ಚಿತ್ರವಿದು. ಈ ಚಿತ್ರದ ನಿರ್ದೇಶಕರಾದ S ಕೃಷ್ಣ ರವರ ಪತ್ನಿ, ಸ್ವಪ್ನ ಕೃಷ್ಣ ರವರು ಈ ಚಿತ್ರಕ್ಕೆ ಬಂಡವಾಳ ಹೂಡಿ 2019 ರಲ್ಲಿ ತೆರೆಗೆ ತಂದರು. ಸುನಿಲ್ ಶೆಟ್ಟಿ ಯವರು ಈ ಚಿತ್ರದಲ್ಲಿ ನಟಿಸಿ ಮೊದಲನೇ ಬಾರಿ sandalwood ಗೆ Entry ಕೊಟ್ಟರು. ಈ ಚಿತ್ರವನ್ನ 9 ಭಾಷೆಗಳಲ್ಲಿ ತೆರೆಗೆ ತರಲು ಚಿತ್ರ ತಂಡ ಯೋಜನೆ ಮಾಡಿತ್ತು. ಆದರೆ ಕೊನೆಗೆ 5 ಭಾಷೆಗಳಲ್ಲಿ ಮಾತ್ರ ತೆರೆಗೆ ತರಲು ಸಾಧ್ಯವಾಯಿತು. ಅರ್ಜುನ್ ಜನ್ಯ ರವರು ಚಿತ್ರಕ್ಕೆ ಸಂಗೀತಾ ನಿರ್ದೇಶನ ಮಾಡಿದ್ದಾರೆ.