ಡಿ ಬಾಸ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಮಾಸ್ ಸಿನಿಮಾಗಳು Challenging Star Darshan 100 Days Movies List
ಡಿ ಬಾಸ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಮಾಸ್ ಸಿನಿಮಾಗಳು Challenging Star Darshan 100 Days Movies
ಬಾಕ್ಸ್ ಆಫೀಸ್ ಸುಲ್ತಾನಾ ಎಂದೇ ಖ್ಯಾತಿ ಪಡೆದು, ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಮ್ಮ ನಿಮ್ಮೆಲ್ಲರ ಪ್ರೀತಿಯ ಡೀ ಬಾಸ್, ಇದಿಷ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಸಿನಿಮಾಗಳು ಎಂದು ತಿಳಿದುಕೊಳ್ಳೋಣ ಬನ್ನಿ.
ಮೆಜೆಸ್ಟಿಕ್
ದರ್ಶನ್ ರವರು ಲೀಡ್ ರೋಲ್ ನಲ್ಲಿ ಮೊದಲು ನಟನೆ ಮಾಡಿದ ಚಿತ್ರ ವೇ ಮೆಜೆಸ್ಟಿಕ್” P N ಸತ್ಯ ರವರು ಬರೆದು, ನಿರ್ದೇಶಿಸಿದ ಚಿತ್ರ. ಈ ಚಿತ್ರಕ್ಕೆ ಸಾಧು ಕೋಕಿಲ ರವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇದು 2002 ರಲ್ಲಿ ತೆರೆ ಕಂಡು, ದರ್ಶನ್ ರವರ ಮೊದಲ ನಟನೆಯಲ್ಲೇ ಶತದಿನೋತ್ಸವ ಆಚರಿಸಿದ ಸೂಪರ್ ಹಿಟ್ ಚಿತ್ರ. ಈ ಚಿತ್ರವನ್ನ, ತೆಲುಗಿನಲ್ಲಿ ಚಾರ್ಮಿನಾರ್ ಎಂದು ರಿಮೇಕ್ ಮಾಡಲಾಯಿತು.
ಕರಿಯ
2003 ರಲ್ಲಿ ದರ್ಶನ್ ಅಭಿನಯದ ಪ್ರೇಮ್ ರವರು ಮೊದಲು ನಿರ್ದೇಶನ ಮಾಡಿ ಗೆದ್ದ ಚಿತ್ರ “ಕರಿಯ”. ಈ ಚಿತ್ರವು ಒಳ್ಳೆ ಓಪನಿಂಗ್ ಪಡೆದರು, 56 ದಿನಗಳನ್ನ ಮಾತ್ರ ಕಾಪಾಲಿ ಚಿತ್ರಮಂದಿರದಲ್ಲಿ ಪ್ರದಶಸಿತು. ನಂತರ ಪ್ರೇಕ್ಷಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ತೆರೆಕಂಡು, ಕರ್ನಾಟಕದಲ್ಲಿ 675 ದಿನಗಳ ಕಾಲ ಪ್ರದರ್ಶನ ಕಂಡು ಬ್ಲಾಕ್ಸಸ್ಟರ್ ಮೂವಿಯಾಯಿತು. ಈ ಚಿತ್ರಕ್ಕೆ ಗುರುಕಿರಣ್ ರವರು ಸಂಗೀತ ನೀಡಿದ್ದಾರೆ.
ಭಗವಾನ್
H ವಾಸು ರವರ ನಿರ್ದೇಶನ, ದರ್ಶನ್ ನಟನೆಯ “ಭಗವಾನ್” ಚಿತ್ರ 2004 ರಲ್ಲಿ ತೆರೆ ಕಂಡು ಶತದಿನೋತ್ಸವ ಆಚರಿಸಿತು. ಈ ಚಿತ್ರಕ್ಕೆ ಸಂಗೀತ ಕೊಟ್ಟವರು ರಾಜೇಶ್ ರಾಮನಾಥ್. ಈ ಚಿತ್ರವನ್ನ ಕೂಡ ಹಿಟ್ ಎಂದು ಪರಿಗಣಿಸಲಾಯಿತು.
ಸ್ಯಾಂಡಲ್ವುಡ್ ನಟರ ಸುಂದರವಾದ ಮನೆಗಳು
ಯೌಟ್ಯೂಬ್ ನಲ್ಲೂ ಕೂಡ ನೋಡಿ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಸಿನಿಮಾಗಳು
Darshan Thoogudeepa best 100 Days Movies
ಕಲಾಸಿಪಾಳ್ಯ
ಅದೆ 2004 ರಲ್ಲಿ ಮತ್ತೊಂದು ದರ್ಶನ್ ರವರ ಬ್ಲಾಕ್ಟಸ್ಟರ್ ಚಿತ್ರವೆಂದರೆ “ಕಲಾಸಿಪಾಳ್ಯ”. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ತೆರೆ ಕಂಡು 250 ದಿನಗಳ ಪ್ರದರ್ಶನ ಕಂಡು ದರ್ಶನ್ ರವರಿಗೆ ಹೆಸರು ತಂದು ಕೊಟ್ಟ ಚಿತ್ರವಿದು. 2004 ರ 2nd highest ಕಲೆಕ್ಷನ್ ಮಾಡಿದ ಚಿತ್ರವೆಂದು ಕರೆಯಲಾಯಿತು. ವೆಂಕಟ್ ನಾರಾಯಣ್ ಮತ್ತು ಸಾದು ಕೋಕಿಲಾ ರವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಅಯ್ಯ
ಮತ್ತೆ ಓಂ ಪ್ರಕಾಶ್ ರಾವ್ ರವರ ನಿರ್ದೇಶನದಡಿಯಲ್ಲಿ, ದರ್ಶನ್ ನಟನೆಯ ” ಅಯ್ಯ” ಚಿತ್ರವು 2005 ರಲ್ಲಿ ತೆರೆ ಕಂಡು ಕರ್ನಾಟಕದ ಅಲವು ಚಿತ್ರಮಂದಿರದಲ್ಲಿ 100 ದಿನಗಳ ಪ್ರದರ್ಶನ ಕಂಡಿತು. ಈ ಚಿತ್ರ ತಮಿಳಿನ “ಸಾಮಿ” ಚಿತ್ರದ ಆಧಾರಿತ ಎಂದು ಕರೆಯಲಾಯಿತು. V ರವಿಚಂದ್ರನ್ ರವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಪೊರ್ಕಿ
ನಾಲ್ಕು ವರ್ಷಗಳ ನಂತರ ದರ್ಶನ್ ರವರ “ಪೊರ್ಕಿ” ಚಿತ್ರ, 2010 ರಲ್ಲಿ M D ಶ್ರೀಧರ್ ರವರ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗುತ್ತೆ. ದರ್ಶನ್ ಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ ಚಿತ್ರ. ಇದು ತೆಲುಗಿನ ಪೋಕಿರಿ ಸಿನಿಮಾದ ರಿಮೇಕ್ ಚಿತ್ರ. ಈ ಚಿತ್ರ ಕೂಡ ಕರ್ನಾಟಕದ ಅಲವು ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಕಂಡು ಸೂಪರ್ ಹಿಟ್ ಖ್ಯಾತಿಗೆ ಸೇರಿತು.
ಸಾರಥಿ
2011 ರಲ್ಲಿ ದರ್ಶನ್ ರವರ ತಮ್ಮ ದಿನಕರ್ ನಿರ್ದೇಶನದಲ್ಲಿ ತೆರೆ ಕಂಡ ಚಿತ್ರ “ಸಾರಥಿ”. ದರ್ಶನ್ ರವರ ಜೋಡಿಯಾಗಿ ದೀಪ ಸನ್ನಿಧಿ ಮೊದಲ ಬಾರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕರೆ ತಂದ ಚಿತ್ರವಿದು. ಈ ಚಿತ್ರಕ್ಕೆ V ಹರಿಕೃಷ್ಣ ರವರು ಸಂಗೀತ ನೀಡಿದ್ದಾರೆ. ಶತ ದಿನೋತ್ಸವದ ಜೊತೆಗೆ ಬಿಗ್ ಬ್ಲಾಕ್ಟಸ್ಟರ್ ಹಿಟ್ ಮೂವಿ ಎಂದೇ ಖ್ಯಾತಿ ಪಡೆದು, ” Best Entertaining Movie of the Year ” ಎಂದು ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ಸ್ ನಿಂದ ಪ್ರಶಸ್ತಿ ಗಿಟ್ಟಿಸಿಕೊಂಡ ಚಿತ್ರ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ದೇಶಭಕ್ತನ ವೀರನ ಪಾತ್ರದಲ್ಲಿ ದರ್ಶನ್ ರವರು ಮಿಂಚಿದ ಚಿತ್ರ ವೇ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಈ ಚಿತ್ರವನ್ನ 2012 ರಲ್ಲಿ ತೆರೆ ಮೇಲೆ ತಂದವರು ನಿರ್ದೇಶಕರಾದ ನಾಗಣ್ಣ ಮತ್ತು ನಿರ್ಮಾಪಕರಾದ ಆನಂದ್ ಅಪ್ಪು ಗೋಳ್. 75 ದು ದಿನಗಳಲ್ಲಿ 55 ದು ಕೋಟಿ ಕಲೆಕ್ಷನ್ ಮಾಡಿ 100 ದಿನಗಳ ಪ್ರದರ್ಶನ ಕಂಡ ದರ್ಶನ್ ರವರ ಮತ್ತೊಂದು ಚಿತ್ರ. 60 Filmfare Awards South ನಲ್ಲಿ ಬೆಸ್ಟ್ ಫಿಲಂ ಮತ್ತು ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದು ಹಾಗು 2 South Indian International Movie Awards ನಲ್ಲೂ ಅತ್ತ್ಯುತ್ತಮ ಸಾಹಸ ನಿರ್ದೇಶನಕ್ಕೆ ಪಾತ್ರವಾದ ಚಿತ್ರ.
ಕನ್ನಡದ ರೋಮ್ಯಾಂಟಿಕ್ ಸಿನಿಮಾಗಳು
ಯೌಟ್ಯೂಬ್ ನಲ್ಲೂ ಕೂಡ ನೋಡಿ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಸಿನಿಮಾಗಳು
ಬುಲ್ ಬುಲ್
ದಿನಕರ್ ತೂಗುದೀಪ್ ಬಂಡವಾಳ ಹೂಡಿ, M D ಶ್ರೀಧರ್ ರವರ ನಿರ್ದೇಶನದಲ್ಲಿ 2013 ರಲ್ಲಿ ತೆರೆ ಕಂಡಂತಹ ‘ಬುಲ್ ಬುಲ್ – ಚಿತ್ರ ಸೂಪರ್ ಹಿಟ್ ಎಂದು ಹೆಸರು ಮಾಡಿ ಕರ್ನಾಟಕದ ಅಲವು ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಕಂಡಿತು. ದರ್ಶನ್ ರವರಿಗೆ ಗೆ ಜೋಡಿ ಯಾಗಿ ಮೊದಲ ಬಾರಿಗೆ ರಚಿತಾ ರಾಮ್ ಸ್ಯಾಂಡಲ್ವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಈ ಚಿತ್ರ ತೆಲುಗಿನ ಡಾರ್ಲಿಂಗ್ ಮತ್ತು 50 First Dates ಎಂಬ ಅಮೆರಿಕನ್ ಕಾಮಿಡಿ ಸಿನಿಮಾದ ರಿಮೇಕ್. ಮತೊಮ್ಮೆ V ಹರಿಕೃಷ್ಣ ರವರ ಸಂಗೀತ.
ಯಜಮಾನ
2019 ರಲ್ಲಿ ಬಿಡುಗಡೆಯಾದ ದರ್ಶನ್ ರವರ ಆಕ್ಷನ್, ಡ್ರಾಮಾ ಸಿನಿಮಾ ನೇ ಯಜಮಾನ ” ಚೊಚ್ಚಲ ನಿರ್ದೇಶನ ಮಾಡಿದ V ಹರಿಕೃಷ್ಣ ರವರು, Pon ಕುಮಾರನ್ ನಿರ್ದೇಶನದ ಜೊತೆಯೊಂದಿಗೆ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ 50 ಕೋಟಿ ಕಲೆಕ್ಷನ್ ಮಾಡಿ ಶತದಿನೋತ್ಸವ ಆಚರಿಸಿದ ಚಿತ್ರ. V ಹರಿಕೃಷ್ಣ ರವರು ನಿರ್ದೇಶನದ ಜೊತೆಗೆ, ಸಂಗೀತ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತ ಚಿತ್ರ. ಚಿತ್ರಕ್ಕೆ ಬಂಡವಾಳ ಹೂಡಿದವರು ಶ್ಯಾಲಜಿ ನಾಗ್ ಮತ್ತು ಬಿ ಸುರೇಶ್ ರವರು.
ಕುರುಕ್ಷೇತ್ರ
ಮತ್ ಅದೇ ವರ್ಷ 2019 ರ ಕೊನೆಯಲ್ಲಿ ದರ್ಶನ್ ರವರ ನಟನೆಯ – ಕುರುಕ್ಷೇತ್ರ 100 ದಿನಗಳ ಪ್ರದರ್ಶನ ಕಂಡ ಮತ್ತೊಂದು ಚಿತ್ರ. ಈ ಚಿತ್ರಕ್ಕೆ ಬಂಡವಾಳ ಹೂಡಿದವರು ಮುನಿರತ್ನ ಹಾಗೆ ನಿರ್ದೇಶನದ ಜವಾಬ್ದಾರಿ ಹೊತ್ತವರು ನಾಗಣ್ಣ. ಈ ಚಿತ್ರ 20 ಮತ್ತು 3D Format ನಲ್ಲಿ ಸರಿ ಸುಮಾರು 1000 ರಕ್ಕೂ ಹೆಚ್ಚು ಸ್ಟೀನ್ ಗಳಲ್ಲಿ ತೆರೆ ಕಂಡ ಐತಿಹಾಸಿಕ ಚಿತ್ರವಾಗಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಈ ಚಿತ್ರ ತೆರೆಕಂಡಿತು. ಮತ್ತೆ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದವರು V ಹರಿಕೃಷ್ಣ.
ಇದಿಷ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಸಿನಿಮಾಗಳು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಸಿನಿಮಾಗಳು
ಯೌಟ್ಯೂಬ್ ನಲ್ಲೂ ಕೂಡ ನೋಡಿ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಸಿನಿಮಾಗಳು