HMT ಅಲ್ಲಿ ಮಷೀನ್ ಆಪರೇಟರ್ ಆಗಿ ಕೆಲಸ ಮಾಡುತಿದ್ದ ಹುಡುಗ ಈಗ ಕನ್ನಡದ ಖ್ಯಾತ ನಟ | Dyanamic King Devraj Biography in Kannada
ಸ್ನೇಹಿತರೆ ನಮಸ್ಕಾರ ಇವತ್ತಿನ ಆರ್ಟಿಕಲ್ ನಲ್ಲಿ HMT ಅಲ್ಲಿ ಮಷೀನ್ ಆಪರೇಟರ್ ಆಗಿ ಕೆಲಸ ಮಾಡುತಿದ್ದ ಹುಡುಗ ಈಗ ಕನ್ನಡದ ಖ್ಯಾತ ನಟ | Dyanamic King Devraj Biography in Kannada ನೋಡೋಣ
80 ಹಾಗು 90 ರ ದಶಕದಲ್ಲಿ ದಿಗ್ಗಜ ಖಳ ನಟರಿರುವ ಕಾಲದಲ್ಲಿ ಇವರು ಹೊಸಬರು, ಆಗ ಖಳನಟರ ಕೊರತೆಯನ್ನು ನೀಗಿಸಿದ ನಟ. ಪೊಲೀಸ್ ಪಾತ್ರಗಳಿಗೆ ಹೇಳು ಮಾಡಿಸಿದಂತ ಇರುವ ಇವರು, ಚಿತ್ರದಿಂದ ಚಿತ್ರಗಳಿಗೆ ವಿಭಿನ್ನ ಪಾತ್ರಗಳನ್ನು ಆರಿಸಿಕೊಂಡು ಚಿತ್ರದ ರಸಿಕರನ್ನು ರಂಜಿಸುತ್ತಾ ಬಂದಿದ್ದಾರೆ. ಇವರೇ ಡೈನಮಿಕ್ ಹೀರೋ ದೇವರಾಜ್ . ಬನ್ನಿ ಇವರ ಬಗ್ಗೆ ವಿವರವಾಗಿ ತಿಳಿಯೋಣ.
ಹುಟ್ಟಿದ್ದು ಸೆಪ್ಟೆಂಬರ್ 20 1961 ಬೆಂಗಳೂರಿನಲ್ಲಿ ಇವರ ತಂದೆ, ಇವರು ಚಿಕ್ಕವರಿರುವಾಗಲೇ ನಿಧನರಾದರು. ಅಮ್ಮ, ಅಣ್ಣ ಹಾಗು ದೇವ್ರಾಜ್ ಮೂವರು. ಇವರು ವಿದ್ಯಾಭ್ಯಾಸ ಪಿಯುಸಿ ಮುಗಿಸಿದ್ದಾರೆ.
BSC ಅನ್ನು ಮಾಡುತ್ತಿರುವಾಗ ಎಚ್ಎಂಟಿಯಲ್ಲಿ ಇವರಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದಾಗ ಬಿ ಎಸ್ ಸಿ ಯನ್ನು ಅರ್ಧಕ್ಕೆ ನಿಲ್ಲಿಸಿ ಎಚ್ಎಂಟಿಯಲ್ಲಿ ಕೆಲಸಕ್ಕೆ ಸೇರಿದರು. ಸುಮಾರು, ಒಂಬತ್ತು ವರ್ಷಗಳ ಕಾಲ HMT ಅಲ್ಲಿ ಮಷೀನ್ ಆಪರೇಟರ್ ಆಗಿ ಕೆಲಸ ಮಾಡಿದರು .
ಚಿಕ್ಕ ವಯಸ್ಸಿನಲ್ಲೇ ದಿಗ್ಗಜ ನಟರ ಅನುಕರಣೆ ಮಾಡುತ್ತಿದ್ದರು ನಂತರ ಲಲಿತಕಲಾ ಸಂಘದಲ್ಲಿ ತರಬೇತಿ ಹವ್ಯಾಸ ನಾಟಕಗಳಲ್ಲಿ ನಟನೆ ಅಲ್ಲಿ ಇವರನ್ನು ಗುರುತಿಸಲ್ಪಟ್ಟರು ಪ್ರೋತ್ಸಾಹ ನೀಡಿದರು, ಮತ್ತೆ ಕಲಾಕ್ಷೇತ್ರಕ್ಕೆ ಬಂದರು. ಅಲ್ಲಿ ಇವರಿಗೆ ದಿಗ್ಗಜ ನಟರ ಪರಿಚಯ ಅವರೊಂದಿಗೆ ಕಲಿಕೆ ಅವರನ್ನು ನೋಡಿ ತರಬೇತಿ ಪಡೆದರು ಪ್ರಾರಂಭದಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟನೆ, ಇವರ ಗತ್ತು ನೋಡಿ ನಿರ್ದೇಶಕರು ಇವರಿಗೆ ನೆಗೆಟಿವ್ ಪಾತ್ರಗಳನ್ನು ನೀಡುತ್ತಾ ಬಂದರು.
ಯುಟ್ಯೂಬ್ ನಲ್ಲೂ ನೋಡಿ – HMT ಅಲ್ಲಿ ಮಷೀನ್ ಆಪರೇಟರ್ ಆಗಿ ಕೆಲಸ ಮಾಡುತಿದ್ದ ಹುಡುಗ ಈಗ ಕನ್ನಡದ ಖ್ಯಾತ ನಟ | Dyanamic King Devraj Biography in Kannada
ನಂತರದ ದಿನಗಳಲ್ಲಿ ಪೋಷಕ ಪಾತ್ರಗಳು ಹಾಗೂ ಎರಡನೇ ನಾಯಕ ನಟ ಪಾತ್ರಗಳಲ್ಲಿ ಮಿಂಚಿದರು. ಇವರ ಅಭಿನಯ ಪಕ್ವವಾಗುತ್ತಿದ್ದಂತೆ ನಾಯಕ ನಟ ಪಾತ್ರಕ್ಕೆ ಆಯ್ಕೆಯಾದರು. ಇವರು ನಟಿಸಿದ ಅಭಿನಯಕ್ಕೆ ಇವರಿಗೆ ದೈನಮಿಕ್ ಹೀರೋ ಎಂಬ ಬಿರುದು ಬಂದಿತು. ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ದೇವ್ರಾಜ್ ವೀರಪ್ಪನ್ ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದು ಕೊಂಡರು ಪಡೆದುಕೊಂಡಿದ್ದರು.
ಪ್ರಾರಂಭದಲ್ಲಿ ಈ ಸಿನಿಮಾದಲ್ಲಿ ನಟಿಸಲು ಸುಲಭದ ಮಾತಾಗಿರಲಿಲ್ಲ ಇವರು ಈ ಸಿನಿಮಾ ಒಪ್ಪಿಕೊಂಡ ಮೇಲೆ ಮನೆಯಲ್ಲಿ ಎಲ್ಲರೂ ಹೆದರಿದ್ದರು ಕಾರಣ ಕಾಡಿನಲ್ಲಿ ಸುದೀರ್ಘ ಒಂದು ತಿಂಗಳುಗಳ ಕಾಲ ಶೂಟಿಂಗ್ ಇತ್ತು. ಆಗ ದೇವರಾಜ್ ರವರ ಪತ್ನಿ ಈ ಚಿತ್ರ ಮಾಡಬೇಡಿ ಎಂದು ಹೇಳಿದ್ದರು. ಮತ್ತೆ ಮಾತುಕತೆ ನಡೆದು ಕೊನೆಗೆ ಒಪ್ಪಿಕೊಂಡರು. ಶೂಟಿಂಗ್ ಇರುವ ಜಾಗಕ್ಕೆ ಮಡದಿ ಮತ್ತು ಮಗನನ್ನು ಕರೆದುಕೊಂಡು ಹೋಗುತಿದ್ದರು.
ಇವರು ಮೊದಲ ಚಿತ್ರ ತ್ರಿಶೂಲ ಆದರೆ ಕಾರಣಾಂತರದಿಂದ ಈ ಚಿತ್ರ ರಿಲೀಸ್ ಆಗಲಿಲ್ಲ , ಈ ಸಿನಿಮಾ ರಿಲೀಸ್ ಆಗದಿದ್ದರೂ ಇವರಿಗೆ ನಟಿಸಲು ಸುಮಾರು ಏಳರಿಂದ ಎಂಟು ಸಿನಿಮಾಗಳು ಕೈಯಲ್ಲಿದ್ದವು. ಮೊದಲ ಸಿನಿಮಾ ನಟನೆಯಿಂದಲೇ ಗಾಂಧಿನಗರದಲ್ಲಿ ಎಲ್ಲರೂ ಗಮನ ಸೆಳೆದಿದ್ದರು ತಮ್ಮ ಮೊದಲ ಚಿತ್ರದಿಂದಲೇ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಚಿರಪರಿಚಿತರಾದ ಇವರು ಚಿತ್ರರಂಗದಲ್ಲಿ ದೊಡ್ಡ ಮರವಾಗಿ ಬೆಳೆದರು. ಚಿತ್ರದಿಂದ ಚಿತ್ರಗಳಿಗೆ ಇವರ ನಟನೆ ಹಾಗೂ ಪಾತ್ರಗಳ ಆಯ್ಕೆ ಶ್ಲಾಗನೀಯ ಪೊಲೀಸ್ ಪಾತ್ರ ಗಳಿಂದಲೇ ಹೆಚ್ಚು ಗುರುತಿಸಿಕೊಂಡ ಇವರು ,
ಹಲವಾರು ಗಂಭೀರ ಪಾತ್ರಗಳಿಗೆ ಹೆಸರುವಾಸಿ ಬರಿ ಪೊಲೀಸ್ ಪಾತ್ರಗಳಿಗೆ ಮಾತ್ರ ಸೀಮಿ ತವಾಗಿರದೆ ಭಿನ್ನಕಥ ಅಂದರ ಹುಳ್ಳ ಹುಲಿಯ ಎಂಬ ಚಿತ್ರದಲ್ಲಿ ನಟಿಸಿದರು. ಸದಾ ಒಂದೇ ತರಹ ಪಾತ್ರಗಳಿಗೆ ಇವರು ಚಿತ್ರದಿಂದ ಚಿತ್ರಕ್ಕೆ ಒಂದೇ ಪಾತ್ರಗಳಿಗೆ ಸೀಮಿತವಾಗಿರದೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದ್ದರು ಇದಕ್ಕೆ ಸಾಕ್ಷಿ ಎಂಬಂತೆ ಇವರು ನಟಿಸಿರುವ ರಾವಣ ಚಿತ್ರವು ಉದಾರಣೆ.
ಸ್ಯಾಂಡಲ್ವುಡ್ ನಟರ ಸುಂದರವಾದ ಮನೆಗಳು

ಇವರ ವೈವಾಹಿಕ ಜೀವನ ವಿಚಾರಕ್ಕೆ ಬಂದರೆ ಇವರ ಮಡದಿ ಕೂಡ ಪ್ರಸಿದ್ಧ ನಟಿ, ಚಂದ್ರಲೇಖ ಅವರು ದೇವ್ರಾಜ್ ಅವರನ್ನು ಪರಿಚಯವಾಗಿದ್ದು ಒಂದು ಸಿನಿಮಾದ ಶೂಟಿಂಗ್ನಲ್ಲಿ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಮದುವೆ ಕೂಡ ಆದರೂ. ಇವರದು ಪ್ರೇಮ ವಿವಾಹ ಇವರಿಗೆ ಇಬ್ಬರು ಮಕ್ಕಳು ಮೊದಲನೇ ಅವರು ಪ್ರಜ್ವಲ್ ಎರಡನೇ ಅವರು ಪ್ರಣಮ್.
ಪ್ರಜ್ವಲ್ ಕೂಡ ಕನ್ನಡ ಸಿನಿ ರಂಗದ ಹೆಸರಾಂತ ನಟ, ಪ್ರಣವ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಕುಟುಂಬವೆಲ್ಲ ಸಿನಿಮಾ ಕಲಾವಿದರು ದೇವರಾಜ್ ರವರು ಸುಮಾರು 200 ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದು, ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಕನ್ನಡದ ದಿಗ್ಗಜ ನಟರಲ್ಲಿ ದೇವರಾಜ್ ಕೂಡ ಒಬ್ಬರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರ ಆಗಿರುವ ಇವರು ಇನ್ನು ಹಲವಾರು ಚಿತ್ರಗಳಲ್ಲಿ ನಟಿಸಲಿ ಎಂದು ಹಾರೈಸೋಣ
ಇದಿಷ್ಟು HMT ಅಲ್ಲಿ ಮಷೀನ್ ಆಪರೇಟರ್ ಆಗಿ ಕೆಲಸ ಮಾಡುತಿದ್ದ ಹುಡುಗ ಈಗ ಕನ್ನಡದ ಖ್ಯಾತ ನಟ | Dyanamic King Devraj Biography in Kannada

ಯುಟ್ಯೂಬ್ ನಲ್ಲೂ ನೋಡಿ – HMT ಅಲ್ಲಿ ಮಷೀನ್ ಆಪರೇಟರ್ ಆಗಿ ಕೆಲಸ ಮಾಡುತಿದ್ದ ಹುಡುಗ ಈಗ ಕನ್ನಡದ ಖ್ಯಾತ ನಟ | Dyanamic King Devraj Biography in Kannada