ಒಲವಿನ ಉಡುಗೊರೆ
1987 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅಂಬರೀಷ್ , ಲೀಲಾವತಿ, ರಾಮಕೃಷ್ಣ , ದಿನೇಶ್ ಮುಂತಾದವರು ನಟಿಸಿದ್ದಾರೆ ವೈದ್ಯಕೀಯ ವಿಧ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ಮುಖ ಸುಟ್ಟುಕೊಂಡಾಗ ಅವನ ಪ್ರೇಯಸಿ ದೂರವಾಗುತ್ತಾಳೆ..ನಂತರ ಇವರ ಬಾಳಲ್ಲಿ ಏನೆಲ್ಲ ಆಗುವುದು ಚಿತ್ರದ ಕಥೆ., ಈ ಚಿತ್ರದ ನಟನೆಗಾಗಿ ಅಂಬಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.
ಗೀತಾ
1981 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಶಂಕರ್ನಾಗ್ , ಅಕ್ಷತಾರಾವ್, ರಮೇಶ್ಭಟ್ , ಅರುಂಧತಿನಾಗ್ಮುಂತಾದವರು ನಟಿಸಿದ್ದಾರೆ. ಶಂಕರನಾಗ್ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿದ್ದ ಈ ಚಿತ್ರ ಕನ್ನಡದ ಪ್ರಸಿದ್ಧ ರೋಮ್ಯಾಂಟಿಕ್ ಟ್ರಾಜಿಡಿ ಚಿತ್ರಗಳಲ್ಲಿ ಒಂದಾಗಿದೆ ಇಳಯರಾಜ ಅವರ ಸಂಗೀತದಲ್ಲಿ ಬಂದ ಹಾಡುಗಳು ಇಂದಿಗೂ ಆಗಿ ಹಿಟ್ ಆಗಿ ಉಳಿದಿದೆ
ಎರಡು ಕನಸು
1974 ರಲ್ಲಿ ತೆರೆಕಂಡ ವಾಣಿ ಎಂಬ ಕಾದಂಬರಿ ಆಧಾರಿತ ಚಿತ್ರವಾಗಿದೆ ದೊರೈ ಭಗವಾನ್ ಅವರು ನಿರ್ದೇಶನ ಮಾಡಿದ್ದಾರೆ ರಾಜಕುಮಾರ್ , ಕಲ್ಪನಾ, ಮಂಜುಳಾ ,ಕೆಎಸ್ಅಶ್ವಥ್ ಮುಂತಾದವರು ನಟಿಸಿದ್ದಾರೆ ಚಿತ್ರದ ಗೀತೆಗಳು ಇಂದಿಗೂ ಜನಪ್ರಿಯವಾಗಿವೆ.
ನಾ ನಿನ್ನ ಮರೆಯಲಾರೆ
1976 ರಲ್ಲಿ ತೆರೆಕಂಡ ಚಿತ್ರವಾಗಿದ್ದು ಡಾಕ್ಟರ್ ರಾಜಕುಮಾರ್ , ಲಕ್ಷ್ಮಿ , ಲೀಲಾವತಿ , ಲೋಕಃನಾಥ್ ಮುಂತಾದವರು ನಟಿಸಿದ್ದಾರೆ ಈ ಚಿತ್ರ ಸುಮಾರು 25 ವಾರ ಪ್ರದರ್ಶನ ಕಂಡಿತು. ಉದಯಶಂಕರ್ ಸಾಹಿತ್ಯ ಮತ್ತು ರಾಜನ್-ನಾಗೇಂದ್ರ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳು ಹಿಟ್ ಆಗಿದ್ದವು
ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿಯರು
ಬಂಧನ
1988 ರಲ್ಲಿ ತೆರೆಕಂಡ ಚಿತ್ರ ವಿಷ್ಣುವರ್ಧನ್ ಸುಹಾಸಿನಿ , ಜೈ ಜಗದೀಶ್, ರೂಪಾದೇವಿ ಮುಂತಾದವರು ನಟಿಸಿದ್ದಾರೆಭಗ್ನ ಪ್ರೇಮಿಯ ಪಾತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರವರು ಅಭೂತಪೂರ್ವವಾಗಿ ನಟಿಸಿದ್ದರು. ವಿಷ್ಣು-ಸುಹಾಸಿನಿ ಜೋಡಿ ಮುಂದೆ ಹಲವಾರು ಚಿತ್ರಗಳಲ್ಲಿ ನಟಿಸಿಬೆಸ್ಟ್ onscreen ಕಪಲ್ ಎಂದೇ ಪ್ರಸಿದ್ದಿ ಆಯಿತು
ಪ್ರೇಮಲೋಕ
1987 ರಲ್ಲಿತೆರೆಕಂಡಚಿತ್ರರವಿಚಂದ್ರನ್ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿದ ಚಿತ್ರ ಪ್ರೇಮಲೋಕ. ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಮೊದಲಚಿತ್ರದ್ಲಲಿ ಚಿತ್ರದಲ್ಲಿ ಚಿತ್ರರಂಗದ ದಿಗ್ಗಜರಾದ ವಿಷ್ಣು, ಅಂಬಿ ಮತ್ತು ಟೈಗರ್ ಪ್ರಭಾಕರ್ ರವರು ವಿಶೇಷ ಪಾತ್ರಗಳಲ್ಲಿ ನಟಿಸಿದರು.
ತಾಜ್ ಮಹಲ್
2008 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅಜಯ್ ರಾವ್ , ಪೂಜಾ ಗಾಂಧಿ , ಅನಂತ್ ನಾಗ್ ಮುಂತಾದವರು ನಟಿಸಿದ್ದಾರೆ ಆರ್.ಚಂದ್ರು ನಿರ್ದೇಶನ ಮಾಡಿದ್ದಾರೆ ಚಿತ್ರವೂ 100 ದಿನಗಳನ್ನು ಪೂರೈಸುವ ಮೂಲಕ ಹಲವಾರು ಅವಾರ್ಡ್ಗಳನ್ನು ಗೆದ್ದಿದೆ . ಇದೆ ಹೆಸರಿನಲ್ಲಿ ತೆಲುಗಿನಲ್ಲೂ ಕೂಡ ರಿಮೇಕ್ ಆಗಿದೆ
ಚೈತ್ರದ ಪ್ರೇಮಾಂಜಲಿ
1992 ರಲ್ಲಿ ತೆರೆಕಂಡ ಚಿತ್ರವಾಗಿದ್ದು ರಘುವೀರ್ , ಶ್ವೇತಾ, ಅಭಿಜೀತ್ , ಲೋಕೇಶ್ ಮುಂತಾದವರು ನಟಿಸಿದ್ದಾರೆ ಎಸ್ ನಾರಾಯಣ್ ಚೊಚ್ಚಲ ನಿರ್ದೇಶನದ ಚಿತ್ರ. ಇಬ್ಬರು ಯುವ ಜೋಡಿಗಳ ಕಥೆಯುನ್ನು ಹೊಂದಿರುವ ಈ ಚಿತ್ರ ಕನ್ನಡದ ಅತ್ತ್ಯುತ್ತಮ ರೋಮ್ಯಾಂಟಿಕ್ ಲವ್ ಸ್ಟೋರಿ ಕಮ್ ಟ್ರಾಜಿಡಿ ಸಿನೆಮಾವಾಗಿದೆ
ಜನುಮದ ಜೋಡಿ
1998 ರಲ್ಲಿತೆರೆಕಂಡಚಿತ್ರಟಿ.ಎಸ್.ನಾಗಾಭರಣ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಹಳ್ಳಿಯ ಮುಗ್ಧ ಪ್ರೇಮಿಗಳಾಗಿ ಶಿವಣ್ಣ ಮತ್ತು ಶಿಲ್ಪಾ ಅಮೋಘ ಅಭಿನಯ ನೀಡಿದರು..
ಚೆಲುವಿನ ಚಿತ್ತಾರ
2007 ರಲ್ಲಿ ತೆರೆಕಂಡ ಈ ಚಿತ್ರ ತಮಿಳಿನ khadal ರಿಮೇಕ್ ಆಗಿದ್ದು ಎಸ ನಾರಾಯಣ್ ನಿರ್ದೇಶನ ಮಾಡಿದರು ಮತ್ತು ನಿರ್ಮಾಣ ಮಾಡಿದ್ದು ಗಣೇಶ್ ,ಅಮೂಲ್ಯ, ಕೋಮಲ್ ಕುಮಾರ್ ಮುಂತಾದವರು ನಟಿಸಿದ್ದಾರೆ ಮೆಕಾನಿಕ್ ನನ್ನು ಪ್ರೀತಿಸಿ ಅವನ ಜೊತೆ ಓಡಿ ಹೋಗುವ ಹೈಸ್ಕೂಲ್ ಹುಡುಗಿ, ನಂತರ ಅವರು ಎದುರಿಸುವ ಸವಾಲುಗಳು, ಕೊನೆಗೆ ಅವರ ಪ್ರೀತಿಗೆ ಸಿಗುವ ಅಂತ್ಯ ಪ್ರೇಕಕರನ್ನು ಕಾಡಿತು
ಹುಚ್ಚ
2001 ರಲ್ಲಿ ತೆರೆಕಂಡಿದ್ದ್ದು ತಮಿಳಿನ ಸೇತು ಚಿತ್ರದ ರಿಮೇಕ್ ಆಗಿದ್ದು ಕನ್ನಡದಲ್ಲಿ ಓಂ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ ಕಿಚ್ಚ ಸುದೀಪ್ ಮತ್ತು ರೇಖಾ ವೇದವ್ಯಾಸ್ ಅಭಿನಯ ಕನ್ನಡದಲ್ಲೂ ಮೋಡಿ ಮಾಡಿತು.. ನಂತರ ಕಿಚ್ಚ ಸುದೀಪ್ ಅವರಿಗೆ ದೊಡ್ಡ ಬ್ರೇಕ್ನೀಡಿದ ಜೊತೆಗೆ ಅಭಿಮಾನಿಗಳನ್ನು ತಂದುಕೊಟ್ಟಿತು
ಶಿವಣ್ಣ ಸುಧಾರಾಣಿ ಜೋಡಿಯ ಸೂಪರ್ ಹಿಟ್ ಸಿನಿಮಾಗಳು
ಅಂಬಾರಿ
2009 ರಲ್ಲಿ ತೆರೆಕಂಡ ಎ ಪಿ ಅರ್ಜುನ್ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು ಯೋಗೇಶ್, ಸುಪ್ರೀತಾ , ರಂಗಾಯಣರಘು, ಪೆಟ್ರೋಲ್ ಪ್ರಸನ್ನ ಮುಂತಾದವರು ನಟಿಸಿದ್ದಾರೆ ಬೆಂಗಳೂರಿನಿಂದ ಆಗ್ರಾದ ತಾಜಮಹಲ್ ವರೆಗೆ ಸೈಕಲ್ ಪ್ರಯಾಣ ಕೈಗೊಳ್ಳುವ ನಾಯಕ-ನಾಯಕಿ ಕಥೆ ಯುವ ವೀಕ್ಷಕರ ಗಮನ ಸೆಳೆಯಿತು. ಈ ಚಿತ್ರದ ನಟನೆಗಾಗಿ ಯೋಗೇಶ್ ಅತ್ಯುತ್ತಮ ನಟ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.
ಅಮೃತಧಾರೆ
2005 ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಧ್ಯಾನ್ ಮತ್ತು ರಮ್ಯಾ ನಟಿಸಿದ್ದರು. ಮಗು ಬೇಕೆಂದು ಪತ್ನಿ ಮತ್ತು ಮನೆ ಕಟ್ಟಿದ ನಂತರವೇ ಮುಂದಿನ ವಿಚಾರವೆನ್ನುವ ಆಧುನಿಕ ಯುವ ಪತಿ-ಪತ್ನಿಯರ ಕಥೆ ಗಮನ ಸೆಳೆಯಿತು..ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು
ಮುಂಗಾರು ಮಳೆ
2006 ರಲ್ಲಿ ತೆರೆಕಂಡ ಯೋಗರಾಜ್ ಭಟ್ಟರ ನಿರ್ದೇಶನದ ಚಿತ್ರ ಗಣೇಶ್ , ಪೂಜಾಗಾಂಧಿ , ಅನಂತ್ನಾಗ್ , ಪದ್ಮಜಾರಾವ್ , ಸುಧಾಬೆಳ್ವಾಡಿ, ಮುಂತಾದವರು ನಟಿಸಿದ್ದು ಈ ಚಿತ್ರ ಬ್ಲಾಕ್ಬಸ್ಟರ್ಆಗಿ ಎರಡುವರ್ಷಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡು 75 ಕೋಟಿ ಬಾಚಿತ್ತು
ಕೃಷ್ಣನ್ ಲವ್ ಸ್ಟೋರಿ
2010 ರಲ್ಲಿ ತೆರೆಕಂಡ ಚಿತ್ರ ಅಜಯ್ ರಾವ್, ರಾಧಿಕಾಪಂಡಿತ್ , ಅಚ್ಯುತ್ಕುಮಾರ್ , ಉಮಾಶ್ರೀ ಮುಂತಾದವರು ನಟಿಸಿದ್ದಾರೆ ಪರಸ್ಪರ ಪ್ರೀತಿಸುತ್ತಿದ್ದ ನಾಯಕ-ನಾಯಕಿ. ತನ್ನ ಪ್ರೀತಿಗೆ ಮೋಸ ಮಾಡಿ ಹೋಗುವ ನಾಯಕಿಯ ನವಪ್ರೇಮ ಆರಂಭದಲ್ಲಿ ಕಮರುತ್ತದೆ. ತನಗೆ ಮೋಸ ಮಾಡಿದರೂ, ಅವಳನ್ನು ಇನ್ನೂ ಪ್ರೀತಿಸಿ ಆರೈಕೆ ಮಾಡುವ ನಾಯಕ, ಪಾಪ ಸುಳಿಯಲ್ಲಿ ದುರಂತ ಅಂತ್ಯ ಕಾಣುವ ನಾಯಕಿ, ಹೀಗೆ ಪ್ರೀತಿ-ಪ್ರೇಮಗಳ ಇನ್ನೊಂದು ಮುಖವನ್ನು ತೆರೆದಿಟ್ಟ ಈ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಈ ಚಿತ್ರ ಹಿಟ್ ಕೂಡ ಆಗಿತ್ತು
ಮೈನಾ
2012 ರಲ್ಲಿ ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮೈನಾ ಚಿತ್ರದಲ್ಲಿ ಆ ದಿನಗಳು ಖ್ಯಾತಿ ಚೇತನ್ ಮತ್ತು ನಿತ್ಯಾ ಮೆನನ್ ಜೊತೆಯಾಗಿ ನಟಿಸಿದ್ದರು. ಅಂಗವಿಕಲೆಯನ್ನು ಪ್ರೀತಿಸುವ ನಾಯಕ, ಅವಳನ್ನು ಗುಣಪಡಿಸಲು ಹೋಗಿ, ಹೊಸ ಸಮಸ್ಯೆಗೆ ಸಿಲುಕುತ್ತಾರೆ. ನಂತರ ನೆಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಈ ಜೋಡಿ ಬಲಿಯಾಗುತ್ತದೆ.
ಸಂಜು ವೆಡ್ಸ್ ಗೀತಾ
2011 ರಲ್ಲಿ ತೆರೆಕಂಡ ಚಿತ್ರ ಶ್ರೀನಗರಕಿಟ್ಟಿ ರಮ್ಯಾ, ಸುಹಾಸಿನಿ ಮುಂತಾದವರು ನಟಿಸಿದ್ದಾರೆ ನಾಗಶೇಖರ್ ಕುಂಚದಲ್ಲಿ ಅರಳಿದ ಪ್ರೇಮ ಚಿತ್ರಗಳಲ್ಲಿ ಅಪೂರ್ವವಾಗಿ ನಿಲ್ಲುವ ಚಿತ್ರ ಸಂಜು ವೆಡ್ಸ್ ಗೀತಾ. ಶಂಕರನಾಗ್ ರ ಗೀತಾ ಚಿತ್ರದ ಸಂಜು ಮತ್ತು ಗೀತಾ ಪಾತ್ರಗಳ ಹಾಗೇ ಈ ಚಿತ್ರದಲ್ಲೂ ಈ ಹೆಸರಿನ ಪಾತ್ರಗಳು ದುರಂತ ಅಂತ್ಯ ಕಾಣುತ್ತವೆ.ಈ ಚಿತ್ರ ಕೂಡ ಹಿಟ್ ಕೂಡ ಆಗಿತ್ತು
ಅದ್ದೂರಿ
2012 ರಲ್ಲಿ ಕಂಡ ಎಪಿ ಅರ್ಜುನ್ಅವರ ನಿರ್ದೇಶನದ ಚಿತ್ರ ಧ್ರುವಸರ್ಜಾ ,ರಾಧಿಕಾಪಂಡಿತ್, ತರುಣ್ಚಂದ್ರ ಮುಂತಾದವರು ನಟಿಸಿದ್ದಾರೆ ಚಿತ್ರದಲ್ಲಿನ ನಟನೆಗಾಗಿ ಧ್ರುವಸರ್ಜಾ ಸೈಮಾ ಅವಾರ್ಡ್ಕೂಡ ಪಡೆದಿದ್ದರೆ
1 thought on “ಕನ್ನಡದ ರೋಮ್ಯಾಂಟಿಕ್ ಸಿನಿಮಾಗಳು”