ಪುನೀತ್ ರಾಜಕುಮಾರ್ ಅವರ ೧೦೦ ದಿನ ಪ್ರದರ್ಶನ ಕಂಡ ಕನ್ನಡ ಸಿನಿಮಾಗಳು Power star Puneeth Rajkumar 100 DAYS Movies

Power star Puneeth Rajkumar 100 DAYS Movies

Power Star ಎಂದೇ ಖ್ಯಾತಿ ಪಡೆದು, ಅತೀ ಹೆಚ್ಚು Family ಅಭಿಮಾನಿಗಳನ್ನ ಒಂದಿರೋ ನಮ್ಮ ನಿಮ್ಮೆಲ್ಲರ ಪ್ರೀತಿಯ ಪುನೀತ್ ರಾಜಕುಮಾರ್ ಅವರ ೧೦೦ ದಿನ ಪ್ರದರ್ಶನ ಕಂಡ ಕನ್ನಡ ಸಿನಿಮಾಗಳು Power star Puneeth Rajkumar 100 DAYS Movies ತಿಳಿದುಕೊಳ್ಳೋಣ ಬನ್ನಿ.

ಅಪ್ಪು

ಪುನೀತ್ ರವರು ಲೀಡ್ ರೋಲ್ ನಲ್ಲಿ ಮೊದಲು ನಟನೆ ಮಾಡಿದ ರೋಮ್ಯಾಂಟಿಕ್, ಆಕ್ಷನ್, ಕಾಮಿಡಿ ಚಿತ್ರ ವೇ ” ಅಪ್ಪು”. ಪೂರಿ ಜಗನ್ನಾಥ್ ರವರ ನಿರ್ದೇಶನ ಹಾಗು ಈ ಚಿತ್ರಕ್ಕೆ ಗುರುಕಿರಣ್  ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಪಾರ್ವತಮ್ಮ ರಾಜಕುಮಾರ್ ರವರ ನಿರ್ಮಾಣದಲ್ಲಿ ರಕ್ಷಿತಾ ರವರು ಪುನೀತ್ ಜೋಡಿಯಾಗಿ ಮೊದಲ ಬಾರಿ ಕನ್ನಡ ಸಿನಿಮಾದಲ್ಲಿ ನಟಿಸಿದ ಚಿತ್ರವಿದು. ಇದು 2002 ರಲ್ಲಿ ತೆರೆ ಕಂಡು, ಪುನೀತ್ ರವರ ಮೊದಲ ನಟನೆಯಲ್ಲೇ 200 ದಿನಗಳ ಪ್ರದರ್ಶನ ಕಂಡಿತು. ಈ ಚಿತ್ರವನ್ನ ತೆಲುಗು, ತಮಿಳ್, ಬಂಗಾಳಿ ಹಾಗು ಬಾಂಗ್ಲಾದೇಶ್ ಬಂಗಾಳಿ ಭಾಷೆ ಯಲ್ಲೂ ಕೂಡ ರಿಮೇಕ್ ಮಾಡಲಾಯಿತು.

ಅಭಿ

2003 ರಲ್ಲಿ ಪಾರ್ವತಮ್ಮ ರಾಜಕುಮಾರ್ ರವರ ನಿರ್ಮಾಣದಲ್ಲಿ ಪುನೀತ್ ಜೋಡಿಯಾಗಿ ಮೊದಲ ಬಾರಿ ರಮ್ಯ ರವರು ಕನ್ನಡ ಸಿನಿಮಾದಲ್ಲಿ ನಟಿಸಿದ ರೋಮ್ಯಾಂಟಿಕ್, ಕಾಮಿಡಿ ಚಿತ್ರ. ದಿನೇಶ್ ಬಾಬು ನಿರ್ದೇಶನದಲ್ಲಿ ತೆರೆ ಕಂಡು 175 ದಿನಗಳ ಪ್ರದರ್ಶನ ಕಂಡ ಪುನೀತ್ ರವರ 2 ನೇ ಚಿತ್ರ. ಈ ಚಿತ್ರಕ್ಕೆ ಗುರುಕಿರಣ್  ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರವನ್ನ ತೆಲುಗು ಭಾಷೆಯಲ್ಲೂ ಕೂಡ ರಿಮೇಕ್ ಮಾಡಲಾಯಿತು.

ಸ್ಯಾಂಡಲ್ವುಡ್ ನಟರ ಸುಂದರವಾದ ಮನೆಗಳು

ವೀರ ಕನ್ನಡಿಗ

ಮೆಹರ್ ರಮೇಶ್ ನಿರ್ದೇಶನದಲ್ಲಿ ಪುನೀತ್ ಅಭಿನಯದ ಆಕ್ಷನ್, ಡ್ರಾಮಾ ಚಿತ್ರ.ಪೂರಿ ಜಗನ್ನಾಥ್ ರಚನೆಯಲ್ಲಿ, K S ರಾಮ್ ರಾವ್ ರವರ ನಿರ್ಮಾಣದಡಿಯಲ್ಲಿ ಅನಿತಾ ಹಸ್ಸಾನಂದನಿ ರೆಡ್ಡಿ ಈ ಚಿತ್ರದಲ್ಲಿ ಪುನೀತ್ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಚಕ್ರಿ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. 2004 ರಲ್ಲಿ ತೆರೆ ಕಂಡ ಈ ಚಿತ್ರ 100 ದಿನಗಳ ಪ್ರದರ್ಶನ ಕಂಡಿತು.

ಮೌರ್ಯ

2004 ರಲ್ಲಿ Rockline ವೆಂಕಟೇಶ್ ರವರ ನಿರ್ಮಾಣದಲ್ಲಿ ಪುನೀತ್ ರವರ ಮತ್ತೊಂದು ಚಿತ್ರ. ಪುನೀತ್ ಜೋಡಿಯಾಗಿ ಮೊದಲ ಬಾರಿ ಮೀರಾ ಜಾಸ್ಮಿನ್ ರವರು ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಚಿತ್ರ. S ನಾರಾಯಣ್ ರವರ ನಿರ್ದೇಶನದಲ್ಲಿ ತೆರೆ ಕಂಡು ಕರ್ನಾಟಕದ 16 Centres ಗಳಲ್ಲಿ 100 ದಿನಗಳ ಕಾಲ ಪ್ರದರ್ಶನದೊಂದಿಗೆ ಪುನೀತ್ ರವರ ಸತತ 4 ನೇ ಬಾರಿ ಶತಕ ಬಾರಿಸಿದ ಚಿತ್ರ. ತೆಲುಗಿನ “ಅಮ್ಮ ನನ್ನ ಓ ತಮಿಳ ಅಮ್ಮಾಯಿ” ಚಿತ್ರದ ರಿಮೇಕ್. ಗುರುಕಿರಣ್ ರವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಆಕಾಶ್

ಪುನೀತ್ ಮತ್ತು ರಮ್ಯ ನಟನೆಯ ಮತ್ತೊಂದು ಚಿತ್ರವೇ ಆಕಾಶ್. ಇದೊಂದು ರೋಮ್ಯಾಂಟಿಕ್, ಡ್ರಾಮಾ ಚಿತ್ರ. ಮಹೇಶ್ ಬಾಬು ರವರ ನಿರ್ದೇಶನ ಹಾಗು ಈ ಚಿತ್ರಕ್ಕೆ R P ಪಟ್ನಾಯಕ್  ರವರ ಸಂಗೀತ. ಪಾರ್ವತಮ್ಮ ರಾಜಕುಮಾರ್ ರವರ ನಿರ್ಮಾಣದಲ್ಲಿ 2005 ರಲ್ಲಿ ತೆರೆ ಕಂಡು, 29 ವಾರಗಳ ಪ್ರದರ್ಶನ ಕಂಡು ಹೆಸರು ಮಾಡಿತು. ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ನಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಸಂಕಲನ ಕಾರಕ ಪ್ರಶಸ್ತಿ ದೊರಕಿತು. 

ನಮ್ಮ ಬಸವ

ವೀರ ಶಂಕರ್ ಬೈರಶೆಟ್ಟಿ ನಿರ್ದೇಶನದಲ್ಲಿ ಪುನೀತ್ ಅಭಿನಯದ ಆಕ್ಷನ್, ಡ್ರಾಮಾ ಚಿತ್ರ . ಗೌರಿ ಮುಂಜಲ್ ಪುನೀತ್ ಜೋಡಿಯಾಗಿ ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ. 2005 ರಲ್ಲಿ M ಸತ್ಯ ಕಿರಣ್ ಮತ್ತು A ಸಂತೋಷ್ ರೆಡ್ಡಿ ರವರ ನಿರ್ಮಾಣದಡಿಯಲ್ಲಿ ತೆರೆ ಕಂಡು, ಅಷ್ಟು ಕಮರ್ಷಿಯಲ್ ಸಕ್ಸಸ್ ಕಾಣದಿದ್ರು 100 ದಿನಗಳ ಪ್ರದರ್ಶನ ಮಾಡಿತು. ಈ ಚಿತ್ರಕ್ಕೆ ಗುರುಕಿರಣ್ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ.   

ಅಜಯ್

ಮೆಹರ್ ರಮೇಶ್ ನಿರ್ದೇಶನದಲ್ಲಿ ಪುನೀತ್ ಅಭಿನಯದ ಆಕ್ಷನ್ ಚಿತ್ರ. ಈ ಚಿತ್ರವೂ ತೆಲುಗಿನ “ಒಕ್ಕಡು” ಸಿನಿಮಾದ ರಿಮೇಕ್. Rockline ವೆಂಕಟೇಶ್ ರವರ ನಿರ್ಮಾಣದಡಿಯಲ್ಲಿ ಅನುರಾಧ ಮೆಹೆತ ಈ ಚಿತ್ರದಲ್ಲಿ ಪುನೀತ್ ಜೋಡಿಯಾಗಿ ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ. ಈ ಚಿತ್ರಕ್ಕೆ ಮಣಿ ಶರ್ಮ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. 2006 ರಲ್ಲಿ ತೆರೆ ಕಂಡು 100 ದಿನಗಳ ಪ್ರದರ್ಶನ ಕಂಡಿತು.   

ಅರಸು

2007ರಲ್ಲಿಪಾರ್ವತಮ್ಮ ರಾಜಕುಮಾರ್ ರವರ ನಿರ್ಮಾಣದಲ್ಲಿ ಪುನೀತ್ ಜೋಡಿಯಾಗಿ ರಮ್ಯ 3 ನೇಬಾರಿ ಮತ್ತು ಮೀರಾ ಜಾಸ್ಮಿನ್ ರವರು 2 ನೇ ಬಾರಿನಟಿಸಿದ ರೋಮ್ಯಾಂಟಿಕ್,ಡ್ರಾಮಾ ಚಿತ್ರ. ಮಹೇಶ್ ಬಾಬು ನಿರ್ದೇಶನದಲ್ಲಿ ತೆರೆಗೆ ಬಂದು19 ವಾರಗಳ ಪ್ರದರ್ಶನ ಕಂಡು ಹೆಸರು ಮಾಡಿದಚಿತ್ರ.ಈ ಚಿತ್ರಕ್ಕೆ ಜೋಷುಯ ಶ್ರೀಧರ್ರವರು ಸಂಗೀತಸಂಯೋಜನೆ ಮಾಡಿದ್ದಾರೆ. Filmfare Award ನಲ್ಲಿ ಪುನೀತ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ ತಂದು ಕೊಟ್ಟ ಚಿತ್ರ.

ಪುನೀತ್ ರಾಜಕುಮಾರ್ ಅವರ ೧೦೦ ದಿನ ಪ್ರದರ್ಶನ ಕಂಡ ಕನ್ನಡ ಸಿನಿಮಾಗಳು Power star Puneeth Rajkumar 100 DAYS Movies

ಮಿಲನ

ಪ್ರಕಾಶ್ ರವರ ನಿರ್ದೇಶನದಲ್ಲಿ, ಪುನೀತ್ ರಾಜಕುಮಾರ್, ಪಾರ್ವತಿ ಮತ್ತುಪೂಜಾಗಾಂಧಿ ಯವರ ಅಭಿನಯದಲ್ಲಿ ಮೂಡಿ ಬಂದು500 ದಿನ ಪ್ರದರ್ಶನ ಕಂಡಿತು.ಇದೊಂದುರೋಮ್ಯಾಂಟಿಕ್, ಡ್ರಾಮಾ ಸಿನಿಮಾ.  ಈ ಚಿತ್ರವನ್ನ ಅಲವು ಭಾಷೇಗಳಲ್ಲಿ ರಿಮೇಕ್ ಮಾಡಲಾಯಿತು.

2007 K S ದುಷ್ಯಂತ್ನಿರ್ಮಾಣದಲ್ಲಿತೆರೆ ಕಂಡು ಪುನೀತ್  ರಾಜಕುಮಾರ್ ರವರಿಗೆಕರ್ನಾಟಕ ಸ್ಟೇಟ್ ಅವಾರ್ಡ್ಸ್ ನಲ್ಲಿ ಅತ್ತ್ಯುತ್ತಮ ನಟ ಪ್ರಶಸ್ತಿ ಮತ್ತು Filmfare Awards South ನಲ್ಲಿ ಮನೋ ಮೂರ್ತಿ ಯವರಿಗೆ ಅತ್ಯುತ್ತಮ ಸಂಗೀತಾ ನಿರ್ದೇಶಕ ಪ್ರಶಸ್ತಿಯನ್ನ ತಂದು ಕೊಟ್ಟ ಚಿತ್ರ.

ಬಿಂದಾಸ್

D ರಾಜೇಂದ್ರ ಬಾಬು ನಿರ್ದೇಶನದಲ್ಲಿ ಪುನೀತ್ ಅಭಿನಯದ ಆಕ್ಷನ್, ರೋಮ್ಯಾಂಟಿಕ್, ಕಾಮಿಡಿ  ಚಿತ್ರ . ಹನ್ಸಿಕಾ ಮೋಟ್ವಾನಿ ಪುನೀತ್ ಜೋಡಿಯಾಗಿ ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ. 2008 ರಲ್ಲಿ M ಚಂದ್ರಶೇಖರ್ ರವರ ನಿರ್ಮಾಣದಡಿಯಲ್ಲಿ ತೆರೆ ಕಂಡು ಹುಬ್ಬಳ್ಳಿ ಸೆಂಟರ್ ನ ಒಂದು ಚಿತ್ರಮಂದಿರದಲ್ಲಿ 100 ದಿನಗಳ ಪ್ರದರ್ಶನ ಮಾಡಿತು. ಈ ಚಿತ್ರಕ್ಕೆ ಗುರುಕಿರಣ್ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಬೋಜ್ ಪುರಿ ಭಾಷೆಯಲ್ಲಿ ರಿಮೇಕ್ ಮಾಡಲಾದ ಮೊದಲ ಕನ್ನಡ ಚಿತ್ರ.

ವಂಶಿ

ಇದು 2008 ರಲ್ಲಿ ಪುನೀತ್ ಅಭಿನಯದ ಮತ್ತೊಂದು ಚಿತ್ರ. ಪಾರ್ವತಮ್ಮ ರಾಜಕುಮಾರ್ ರವರ ನಿರ್ಮಾಣದಲ್ಲಿ ಪುನೀತ್ ಜೋಡಿಯಾಗಿ ನಿಖಿತಾ ರವರು ನಟಿಸಿದ ಆಕ್ಷನ್, ಡ್ರಾಮಾ ಚಿತ್ರ.  ಪ್ರಕಾಶ್ ರವರ ನಿರ್ದೇಶನದಲ್ಲಿ ತೆರೆ ಕಂಡು 12  ಸೆಂಟರ್ ಗಳಲ್ಲಿ 100 ದಿನಗಳ ಕಾಲ ಪ್ರದರ್ಶನ ಕಂಡು ಹೆಸರು ಮಾಡಿದ ಚಿತ್ರ. ಲಕ್ಷ್ಮಿ ರವರು ಪುನೀತ್ ತಾಯಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ R P ಪಟ್ನಾಯಕ್ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಕೂಡ ತುಂಬಾ ಹೆಸರು ಮಾಡಿದ ಚಿತ್ರ.

ಪುನೀತ್ ರಾಜಕುಮಾರ್ ಅವರ ೧೦೦ ದಿನ ಪ್ರದರ್ಶನ ಕಂಡ ಕನ್ನಡ ಸಿನಿಮಾಗಳು Power star Puneeth Rajkumar 100 DAYS Movies

ರಾಮ್

K ಮಾದೇಶ್ ನಿರ್ದೇಶನದಲ್ಲಿ ಪುನೀತ್ ಅಭಿನಯದ ರೋಮ್ಯಾಂಟಿಕ್, ಕಾಮಿಡಿ ಚಿತ್ರ. ಈ ಚಿತ್ರವೂ ತೆಲುಗಿನ “Ready” ಸಿನಿಮಾದ ರಿಮೇಕ್. ಆದಿತ್ಯ ಬಾಬು ರವರ ನಿರ್ಮಾಣದಡಿಯಲ್ಲಿ ಪ್ರಿಯಾಮಣಿ ಯವರು ಈ ಚಿತ್ರದಲ್ಲಿ ಪುನೀತ್ ಜೋಡಿಯಾಗಿ ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ. ಈ ಚಿತ್ರಕ್ಕೆ V ಹರಿಕೃಷ್ಣ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. 2009 ರಲ್ಲಿ ತೆರೆ ಕಂಡು 25 ವಾರಗಳ ಪ್ರದರ್ಶನ ಕಂಡಿತು.      

ಪೃಥ್ವಿ

2010 ರಲ್ಲಿ N S ರಾಜಕುಮಾರ್ ಮತ್ತು ಸೂರಪ್ಪ ಬಾಬು ಜೋಡಿಯ ನಿರ್ಮಾಣದಲ್ಲಿ ಪುನೀತ್ ರವರಿಗೆ ಜೋಡಿಯಾಗಿ ಪಾರ್ವತಿ 2 ನೇ ಬಾರಿ ನಟಿಸಿದ ಆಕ್ಷನ್, ಡ್ರಾಮಾ ಚಿತ್ರ. ಜಾಕೋಬ್ ವರ್ಗಹಿಸೆ ರವರ ನಿರ್ದೇಶನದಲ್ಲಿ ತೆರೆ ಕಂಡು 100 ದಿನಗಳ ಕಾಲ ಪ್ರದರ್ಶನ ಕಂಡಿತು. ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರ ಕರ್ನಾಟಕದ A ಸೆಂಟರ್ ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ ಹಿಟ್ ಆದರೂ B, C ಸೆಂಟರ್ಸ್ ನಲ್ಲಿ ಅಂತ ಹೆಸರು ಮಾಡಲಿಲ್ಲ.

ಜಾಕಿ

2011 ರಲ್ಲಿ ಪಾರ್ವತಮ್ಮ ರಾಜಕುಮಾರ್ ರವರ ನಿರ್ಮಾಣದಲ್ಲಿ ಪುನೀತ್ ಜೋಡಿಯಾಗಿ ಭಾವನಾ ಮೊದಲ ಬಾರಿ ಕನ್ನಡದಲ್ಲಿ ನಟಿಸಿದ ಆಕ್ಷನ್, ಡ್ರಾಮಾ ಚಿತ್ರ. ದುನಿಯಾ ಸೂರಿ  ನಿರ್ದೇಶನದಲ್ಲಿ ತೆರೆ ಕಂಡು ಮೆಗಾ ಹಿಟ್ ಎಂದೇ ಖ್ಯಾತಿ ಪಡೆದು 100 ದಿನಗಳ ಪ್ರದರ್ಶನ ಮಾಡಿದಲ್ಲದೆ, ಸೂರಿ, ಯೋಗರಾಜ್ ಭಟ್ ಮತ್ತು V ಹರಿಕೃಷ್ಣ ರವರಿಗೆ ಹೆಸರು ತಂದು ಕೊಟ್ಟ ಚಿತ್ರ. ಈ ಚಿತ್ರಕ್ಕೆ V ಹರಿಕೃಷ್ಣ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. Suvarna Award ನಲ್ಲಿ  ಅತ್ಯುತ್ತಮ ಚಿತ್ರ ಮತ್ತು ಪುನೀತ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಲಭಿಸಿತು.

ಹುಡುಗರು

ಇದು 2011 ರಲ್ಲಿ ಪುನೀತ್ ಅಭಿನಯದ ಮತ್ತೊಂದು ಚಿತ್ರ. ಇದು ತಮಿಳಿನ ಸೂಪರ್ ಹಿಟ್ “ನಾಡೋಡಿಗಳ್” ಸಿನಿಮಾದ ರಿಮೇಕ್. ಪಾರ್ವತಮ್ಮ ರಾಜಕುಮಾರ್ ರವರ ನಿರ್ಮಾಣದಲ್ಲಿ ರಾಧಿಕಾ ಪಂಡಿತ್ ರವರು ಪುನೀತ್ ಜೋಡಿಯಾಗಿ ಮೊದಲು ನಟಿಸಿದ ಒಂದೊಳ್ಳೆ ಡ್ರಾಮಾ ಚಿತ್ರ.  K ಮಾದೇಶ್ ರವರ ನಿರ್ದೇಶನದಲ್ಲಿ ತೆರೆ ಕಂಡು 100 ದಿನಗಳ ಪ್ರದರ್ಶನ ಕಂಡು ಹೆಸರು ಮಾಡಿದ ಚಿತ್ರ. ಶ್ರೀ ನಗರ ಕಿಟ್ಟಿ, ಲೂಸ್ ಮಾದ ಪುನೀತ್ ರವರಿಗೆ ಈ ಚಿತ್ರದಲ್ಲಿ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ V ಹರಿಕೃಷ್ಣ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಪವರ್

K ಮಾದೇಶ್ ನಿರ್ದೇಶನದಲ್ಲಿ ಪುನೀತ್ ಅಭಿನಯದ ಆಕ್ಷನ್, ಕಾಮಿಡಿ ಚಿತ್ರ. ಈ ಚಿತ್ರವೂ ತೆಲುಗಿನ ” ದೂಕುಡು ” ಸಿನಿಮಾದ ರಿಮೇಕ್. 2014 ರಲ್ಲಿ ತ್ರಿಷಾ ಪುನೀತ್ ರವರ ಜೋಡಿಯಾಗಿ ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರ. ಈ ಚಿತ್ರಕ್ಕೆ S S  ತಮನ್ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಕೆಲವು ರೆಕಾರ್ಡ್ Brake ಮಾಡಿ ಶತದಿನೋತ್ಸವ ಆಚರಿಸಿದ ಒಂದು ಕಮರ್ಷಿಯಲ್ ಹಿಟ್ ಸಿನಿಮಾ.

ರಣ ವಿಕ್ರಮ

ಪವನ್ ವಡೆಯರ್ ನಿರ್ದೇಶನದಲ್ಲಿ ಪುನೀತ್ ಅಭಿನಯದ ಮೊದಲ ಆಕ್ಷನ್, ಥ್ರಿಲ್ಲರ್  ಚಿತ್ರ . ಅಂಜಲಿ ಮತ್ತು ಅದಾಹ್ ಶರ್ಮ ರವರು ಪುನೀತ್ ಜೋಡಿಯಾಗಿ ನಟಿಸಿದ ಮೊದಲ ಸಿನಿಮಾ. 2015 ರಲ್ಲಿ ಜಯಣ್ಣ ಭೋಗೇಂದ್ರ ರವರ ನಿರ್ಮಾಣದಡಿಯಲ್ಲಿ ತೆರೆ ಕಂಡು ಕರ್ನಾಟಕದ ಅಲವು ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಮಾಡಿತು. ಈ ಚಿತ್ರಕ್ಕೆ V ಹರಿಕೃಷ್ಣ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ.    

ದೊಡ್ಮನೆ ಹುಡುಗ

2016 ರಲ್ಲಿ M  ಗೋವಿಂದ ರವರ ನಿರ್ಮಾಣದಲ್ಲಿ ಪುನೀತ್ ಜೋಡಿಯಾಗಿ ರಾಧಿಕಾ ಪಂಡಿತ್  ಎರಡನೇ ಬಾರಿ ನಟಿಸಿದ ಆಕ್ಷನ್, ಡ್ರಾಮಾ ಚಿತ್ರ. ದುನಿಯಾ ಸೂರಿ ಯವರ ರಚನೆ, ನಿರ್ದೇಶನದಲ್ಲಿ ತೆರೆ ಕಂಡು ಹುಬ್ಬಳ್ಳಿಯಲ್ಲಿ 100 ದಿನಗಳ ಪ್ರದರ್ಶನ ಕಂಡಿತು. ಈ ಚಿತ್ರಕ್ಕೆ V ಹರಿಕೃಷ್ಣ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ರಾಜಕುಮಾರ

2017 ರಲ್ಲಿ ವಿಜಯ್ ಕಿರಂಗದೂರ್ ರವರ ನಿರ್ಮಾಣದಲ್ಲಿ ಪುನೀತ್ ಜೋಡಿಯಾಗಿ ಪ್ರಿಯಾ ಆನಂದ್ ಮೊದಲ ಬಾರಿ ಕನ್ನಡದಲ್ಲಿ ನಟಿಸಿದ ಆಕ್ಷನ್, ಡ್ರಾಮಾ ಚಿತ್ರ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ತೆರೆ ಕಂಡು ಸೂಪರ್ ಡೂಪರ್ ಹಿಟ್ ಎಂದೇ ಖ್ಯಾತಿ ಪಡೆದು 100 ದಿನಗಳ ಪ್ರದರ್ಶನ ಮಾಡಿದಲ್ಲದೆ, ಅಲವು ಪ್ರಶಸ್ತಿಗಳನ್ನ ಗಿಟ್ಟಿಸಿ ಕೊಂಡ ಚಿತ್ರ. ಈ ಚಿತ್ರಕ್ಕೆ V ಹರಿಕೃಷ್ಣ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಂದಿನ ದಿನಕ್ಕೆ ಸ್ಯಾಂಡಲ್ವುಡ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನೆಮಾವೆಂದೇ ಹೆಸರು ಮಾಡಿತು.

ನಟಸಾರ್ವಬೌಮ

ಎರಡನೇ ಬಾರಿ ಪವನ್ ವಡೆಯರ್ ನಿರ್ದೇಶನದಲ್ಲಿ ಪುನೀತ್ ಅಭಿನಯದ ಸೂಪರ್ ನ್ಯಾಚುರಲ್ ಆಕ್ಷನ್  ಚಿತ್ರ . ಅನುಪಮ ಪರಮೇಶ್ವರ್ ರವರು ಪುನೀತ್ ಜೋಡಿಯಾಗಿ ನಟಿಸಿದ ಮೊದಲ ಕನ್ನಡ ಸಿನಿಮಾ. 2019 ರಲ್ಲಿ Rockline ವೆಂಕಟೇಶ್ ರವರ ನಿರ್ಮಾಣದಡಿಯಲ್ಲಿ ತೆರೆ ಕಂಡು ಕರ್ನಾಟಕದ ಅಲವು ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಮಾಡಿತು. ಈ ಚಿತ್ರಕ್ಕೆ D Imman ರವರು ಸಂಗೀತ ಸಂಯೋಜನೆ ಮಾಡಿದ್ದಾರೆ.  

ಪುನೀತ್ ರಾಜಕುಮಾರ್ ಅವರ ೧೦೦ ದಿನ ಪ್ರದರ್ಶನ ಕಂಡ ಕನ್ನಡ ಸಿನಿಮಾಗಳು Power star Puneeth Rajkumar 100 DAYS Movies

Power star Puneeth Rajkumar 100 DAYS Movies

Leave a Comment