ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies

ಇವತ್ತಿನ ಆರ್ಟಿಕಲ್ ನಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies ಯಾವುವೆಂದು ನೋಡೋಣ

ಸತ್ಯ ಹರಿಶ್ಚಂದ್ರ

ಹುಣಸೂ‌ರ್ ಕೃಷ್ಣಮೂರ್ತಿ ರವರ ನಿರ್ದೇಶನದಲ್ಲಿ ರಾಜಕುಮಾರ್, ಉದಯ್ ಕುಮಾರ್ ಮತ್ತು ಪಂಡಿರ ಬಾಯಿ ಅಭಿನಯದ ಚಿತ್ರ. ಇದು ಭಾರತದ 3 ನೇ ಮತ್ತು ದಕ್ಷಿಣ ಭಾರತದ ಮೊದಲನೆಯ ಡಿಜಿಟಲ್ coloured ಚಿತ್ರ. K V ರೆಡ್ಡಿ ಯವರ ನಿರ್ಮಾಣದಲ್ಲಿ ತೆರೆ ಕಂಡು ಶತ ದಿನೋತ್ಸವ ಆಚರಿಸಿತು.

ಜೇಡರ ಬಲೆ

ರಾಜಕುಮಾರ್, ಜಯಂತಿ ಅಭಿನಯದ ಸ್ಪಯ್ ಥಿಲರ್ ಚಿತ್ರ. 1968 ರಲ್ಲಿ ದೊರೆ ಭಗವಾನ್ ರವರ ರಚನೆ, ನಿರ್ದೇಶನದಲ್ಲಿ ತೆರೆ ಕಂಡು 100 ದಿನಗಳ ಪ್ರದರ್ಶನ ಮಾಡಿತು. ಈ ಚಿತ್ರದ ಬಜೆಟ್ ಬಂದು 3 ಲಕ್ಷ. 2 ಲಕ್ಷ ವನ್ನ ಬರಿ ಡಬ್ಬಿಂಗ್ ರೈಟ್ಸ್ ನಲ್ಲೆ ಸಂಪಾದಿಸಿದ ಚಿತ್ರ. G K ವೆಂಕಟೇಶ್ ರವರು ಈ ಚಿತ್ರಕ್ಕೆ ಸಂಗೀತಾ ನಿರ್ದೇಶನ ಮಾಡಿದ್ದಾರೆ.

ಗೋವಾದಲ್ಲಿ CID 999

1968 ರಲ್ಲಿ ರಾಜಕುಮಾರ್, ಲಕ್ಷ್ಮಿ, ನರಸಿಂಹ ರಾಜು ಅಭಿನಯದ ಡಿಟೇಕ್ಟಿವ್, ಕ್ರೈಂ, ಸ್ಪಮ್ ದ್ರಿಲರ್ ಚಿತ್ರ. ಲಕ್ಷ್ಮಿ ರವರ ಮೊದಲ ಕನ್ನಡ ಚಿತ್ರ. ದೊರೈ ಭಗವಾನ್ ರವರು ರಚಿಸಿ, ನಿರ್ಮಿಸಿ ಮತ್ತು ನಿರ್ದೇಶನ ಮಾಡಿ 25 ವಾರಗಳ ಪ್ರದರ್ಶನ ಕಂಡ ಚಿತ್ರ. ಈ ಚಿತ್ರಕ್ಕೆ G K ವೆಂಕಟೇಶ್ ರವರು ಸಂಗೀತಾ ಸಂಯೋಜನೆ ಮಾಡಿದ್ದಾರೆ.

ಯುಟ್ಯೂಬ್ ನಲ್ಲೂ ನೋಡಿ – ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies

ಕಸ್ತೂರಿ ನಿವಾಸ

K C N ಗೌಡ ರವರ ನಿರ್ಮಾಣದಲ್ಲಿ ರಾಜಕುಮಾರ್, ಆರತಿ ಮತ್ತು ಜಯಂತಿ ಅಭಿನಯದ ಡ್ರಾಮಾ ಚಿತ್ರ. 1971 ರಲ್ಲಿ ದೊರೈ ಭಗವಾನ್ ರವರ ನಿರ್ದೇಶನದಲ್ಲಿ ತೆರೆ ಕಂಡು 175 ದಿನಗಳ ಪ್ರದರ್ಶನ ಮಾಡಿ, ಕರ್ನಾಟಕ ರಾಜ್ಯದ 16 ಸೆಂಟರ್ಸ್ ಗಳಲ್ಲಿ 100 ವಾರಗಳನ್ನ ಪೂರೈಸಿದ ಚಿತ್ರ. ಈ ಚಿತ್ರಕ್ಕೆ G K ವೆಂಕಟೇಶ್ ರವರ ಸಂಗೀತವಿದೆ.

ಬಂಗಾರದ ಮನುಷ್ಯ

1972 ರಲ್ಲಿ ರಾಜಕುಮಾರ್, ಭಾರತಿ, ಆರತಿ, ಶ್ರೀನಾಥ್, ವಜ್ರಮುನಿ, ಬಾಲಕೃಷ್ಣ, ದ್ವಾರಕೇಶ್ ಅಭಿನಯದ ಚಿತ್ರ. ಸಿದ್ದಲಿಂಗಯ್ಯ ರವರ ನಿರ್ದೇಶನದಲ್ಲಿ ತೆರೆ ಕಂಡು ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ 2 ವರ್ಷ ಮತ್ತು ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 1 ವರ್ಷಕ್ಕೂ ಅಧಿಕ ಕಾಲ ಪ್ರದರ್ಶನ ಮಾಡಿದ ಚಿತ್ರ. G K ವೆಂಕಟೇಶ್ ರವರು ಈ ಚಿತ್ರಕ್ಕೆ ಸಂಗೀತಾ ನಿರ್ದೇಶನ ಮಾಡಿದ್ದಾರೆ.

ನಾಗರಹಾವು

1972ರಲ್ಲಿ ತೆರೆಕಂಡ ಚಿತ್ರ ಇದಾಗಿದ್ದು dr ವಿಷ್ಣುವರ್ಧನ್ , ಆರತಿ , ಲೋಕಃನಾಥ್ , ಕೆ ಎಸ ಅಶ್ವತ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.  ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ ತರಾಸು ಕಾದಂಬರಿ ಆಧಾರಿತ  ಚಿತ್ರ ನಾಗರಹಾವು.  ಪ್ರಪ್ರಥಮ ಬಾರಿಗೆ ಮೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಕಂಡ ಚಿತ್ರ.

ಶಂಕ‌ರ್ ಗುರು

V ಸೋಮಶೇಖರ್ ರವರ ನಿರ್ದೇಶನದಲ್ಲಿ ರಾಜಕುಮಾರ್, ಜಯಮಾಲಾ, ಚಿತ್ರವನ್ನ ತೆಲುಗಿನಲ್ಲಿ ರಿಮೇಕ್ ಮಾಡಲಾಯಿತು. ಈ ಚಿತ್ರಕ್ಕೆ G K ವೆಂಕಟೇಶ್ ರವರ ಪದ್ಮ ಪ್ರಿಯ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಅಭಿನಯದ ಚಿತ್ರ. 1978 ರಲ್ಲಿ ಪಾರ್ವತಮ್ಮ ರಾಜಕುಮಾರ್ ರವರ ನಿರ್ಮಾಣದಲ್ಲಿ ತೆರೆ ಕಂಡು 1 ವರ್ಷ ಕಾಲ ಪ್ರದರ್ಶನ ಮಾಡಿದ ಬ್ಲಾಕ್ ಬಾಸ್ಟರ್ ಚಿತ್ರ. ಈ ಚಿತ್ರವನ್ನ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ರಿಮೇಕ್ ಮಾಡಲಾಯಿತು. ಉಪೇಂದ್ರ ಕುಮಾರ್ ರವರು ಈ ಚಿತ್ರಕ್ಕೆ ಸಂಗೀತಾ ನೀಡಿದ್ದಾರೆ.

ಯುಟ್ಯೂಬ್ ನಲ್ಲೂ ನೋಡಿ – ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies

ಪ್ರೇಮಲೋಕ

1987 ರಲ್ಲಿ ತೆರೆಕಂಡ ಚಿತ್ರ ಇದಾಗಿದ್ದು ರವಿಚಂದ್ರನ್ mattu ಜೂಹಿ ಚಾವ್ಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಅಂಬರೀಷ್ , ಪ್ರಭಾಕರ್ , ವಿಷ್ಣುವರ್ಧನ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ  ಕ್ರೇಜಿ ಸ್ಟಾರ್ ರವಿಚಂದ್ರನ್  ನಟನೆ ಜೊತೆ  ನಿರ್ದೇಶನದ ಮಡಿದ ಮೊದಲ  ಚಿತ್ರ .   ಪ್ರೇಮಲೋಕ ಕನ್ನಡದ ಎವರ್ ಗ್ರೀನ್ ರೋಮ್ಯಾಂಟಿಕ್ ಚಿತ್ರ ಒಂದು ವರ್ಷಗಳ ಕಾಲ ಪ್ರದರ್ಶನ ಕಂಡಿದೆ

ನಂಜುಂಡಿ ಕಲ್ಯಾಣ

1989 ರಲ್ಲಿ ತೆರೆ ಕಂಡ ಚಿತ್ರ. ರಾಘವೇಂದ್ರ ರಾಜಕುಮಾರ್ mattu ಮಾಲಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ . ಪಾರ್ವತಮ್ಮ ರಾಜಕುಮಾರ್ ಅವರು ವಜ್ರೇಶ್ವರಿ ಕಂಬೈನ್ಸ್ ಅಡಿ ಯಲ್ಲಿ ತಾವೇ ನಿರ್ಮಾಣ ಮಾಡಿದರು . ಈ  ಚಿತ್ರ ಸುಮಾರು 500 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡಿತು.

ಜೀವನ ಚೈತ್ರ

3 ವರ್ಷಗಳ ನಂತರ ರಾಜಕುಮಾರ್ ನಟಿಸಿದ ಚಿತ್ರ. 1992 ರಲ್ಲಿ ದೊರೈ ಭಗವಾನ್ ರವರ ನಿರ್ದೇಶನದಲ್ಲಿ ತೆರೆ ಕಂಡು 52 ವಾರಗಳ ಪ್ರದರ್ಶನ ಮಾಡಿದ ಸೂಪರ್ ಹಿಟ್ ಚಿತ್ರ. ಈ ಚಿತ್ರವು ವಿಶಾಲಕ್ಷ್ಮಿ ದಕ್ಷಿಣ ಮೂರ್ತಿ ರವರ ” ವ್ಯಾಪ್ತಿ ಪ್ರಾಪ್ತಿ ” ಎಂಬ ಕಾದಂಬರಿ ಆಧಾರಿತ ಚಿತ್ರ. ಈ ಚಿತ್ರವನ್ನ ಪಾರ್ವತಮ್ಮ ರಾಜಕುಮಾರ್ ರವರು ನಿರ್ಮಾಣ ಮಾಡಿದ್ದಾರೆ. ಉಪೇಂದ್ರ ಕುಮಾರ್ ರವರು ಸಂಗೀತಾ ನೀಡಿದ್ದಾರೆ.

ಓಂ

1995 ರಲ್ಲಿ ತೆರೆ ಕಂಡ ಚಿತ್ರ  ಶಿವರಾಜಕುಮಾರ್ , ಪ್ರೇಮ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ . ಉಪೇಂದ್ರ ನಿರ್ದೇಶನದಲ್ಲಿ ಮೂಡಿಬಂದ ಶಿವಣ್ಣ ನಾಯಕನಾಗಿ ನಟಿಸಿದ ಈ ಚಿತ್ರ ಸುಮಾರು 600 ಕ್ಕಿಂತ ಹೆಚ್ಚು ಬಾರಿ ಬಿಡುಗಡೆಯಾಗಿ ಲಿಮ್ಕಾ ದಾಖಲೆ ಮಾಡಿದೆ. ಚಿತ್ರ ಬಿಡುಗಡೆಯಾದ ಇಪ್ಪತ್ತು ವರ್ಷಗಳ ನಂತರ ಚಿತ್ರದ ಸ್ಯಾಟಲೈಟ್ ರೈಟನ್ನು ಉದಯ ಟಿವಿ ಹತ್ತು ಕೋಟಿಗೆ ತೆಗೆದುಕೊಂಡಿದೆ

ದರ್ಶನ್ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿರುವ ನಟಿಯರು – Best Mother Roles in Darshan Movies

ಜನುಮದ ಜೋಡಿ

1996ರಲ್ಲಿ ತೆರೆಕಂಡ ಚಿತ್ರ . ಶಿವರಾಜ್ಕುಮಾರ್ ಮತ್ತು ಶಿಲ್ಪಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಟಿ.ಎಸ್.ನಾಗಾಭರಣ ನಿರ್ದೇಶನದ ಜನುಮದ ಜೋಡಿ ಒಂದುವರೆ ವರ್ಷ ಪ್ರದರ್ಶನ ಕಂಡು ಹತ್ತು ಕೋಟಿ ಗಳಿಸದ ಮೊದಲ ಕನ್ನಡ ಚಿತ್ರವಾಗಿ ಹೊರ ಹೊಮ್ಮಿತು

ಯಜಮಾನ

2000 ನೇ ಇಸವಿಯಲ್ಲಿ ತೆರೆಕಂಡ ಚಿತ್ರ ವಿಷ್ಣುವರ್ಧನ್ , ಅಭಿಜಿತ್ ಮತ್ತು ಶಶಿ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ .  ಸಾಹಸಸಿಂಹ ವಿಷ್ಣುವರ್ಧನ್  ದ್ವಿಪಾತ್ರದಲ್ಲಿ ನಟಿಸಿದ ಯಜಮಾನ ಕನ್ನಡದ ಬಹುದೊಡ್ಡ ಬ್ಲಾಕ್ ಬ್ಲಸ್ಟರ್ ಚಿತ್ರ. ಒಂದು ವರ್ಷಕಾಲ ತುಂಬು ಪ್ರದರ್ಶನ ಕಂಡ ಈ ಚಿತ್ರ  ಸುಮಾರು 45 ಕೋಟಿ ಗಳಿಕೆ ಕಂಡಿತು.

ಯುಟ್ಯೂಬ್ ನಲ್ಲೂ ನೋಡಿ – ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies

ಅಪ್ಪು

2002 ರಲ್ಲಿ ತೆರೆಕಂಡ ಪುನೀತ್ ನಾಯಕನಾಗಿ ಮತ್ತು ರಕ್ಷಿತಾ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ . ಪುರಿ ಜಗನಾಥ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಪುನೀತ್ ಅವರ ಮೊದಲ ನಟನೆಯಲ್ಲೇ 250ಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡಿತು

ಚಂದ್ರ ಚಕೋರಿ

೨೦೦3 ರಲ್ಲಿ ತೆರೆಕಂಡ  ಎಸ್ ನಾರಾಯಣ ನಿರ್ದೇಶನದಲ್ಲಿ ಮೂಡಿಬಂದ `ಚಂದ್ರ ಚಕೋರಿ’  500 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡಿದೆ

ಕರಿಯ

2003 ರಲ್ಲಿ ತೆರೆಕಂಡ ಚಿತ್ರ ದರ್ಶನ ಮತ್ತು ಅಭಿನಯಶ್ರೀ  ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ .  ಪ್ರೇಮ್ ನಿರ್ದೇಶನದಲ್ಲಿ ದರ್ಶನ್ ನಾಯಕನಾಗಿ ಅಭಿನಯಿಸಿದ್ದ ಭೂಗತ ಲೋಕದ ಈ ಚಿತ್ರ  800 ದಿನಗಳ ಕಾಲ ಪ್ರದರ್ಶನ ಕಂಡಿದೆ . ಸುಮಾರು 15 ಕ್ಕಿಂತ ಹೆಚ್ಚು ಬಾರಿ ಮರು ಬಿಡುಗಡೆಯಾಗಿದೆ .

ಆಪ್ತಮಿತ್ರ

2004 ರಲ್ಲಿ ತೆರೆ ಕಂಡ ಚಿತ್ರ . ದ್ವಾರಕೀಶ್ ನಿರ್ಮಾಣ ಮಾಡಿ ಪಿ ವಾಸು ನಿರ್ದೇಶಿದ  ಚಿತ್ರ  ವಿಷ್ಣುವರ್ಧನ್ ಮತ್ತು ರಮೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರ ಒಂದು ವರ್ಷ ಕಾಲ  ಪ್ರದರ್ಶನ ಕಂಡಿತು.

ಜೋಗಿ

2005 ರಲ್ಲಿ ತೆರೆಕಂಡ ಚಿತ್ರ . ಶಿವರಾಜ್ಕುಮಾರ್ ಹಾಗು ಜೆನಿಫರ್ ಮುಖ್ಯ ಪಾತ್ರಾದಲ್ಲಿ ನಟಿಸಿದ್ದಾರೆ  ಪ್ರೇಮ್ ನಿರ್ದೇಶನದಲ್ಲಿ ಶಿವಣ್ಣ ನಾಯಕನಾಗಿ ನಟಿಸಿದ ಈ ಚಿತ್ರ  ಸುಮಾರು 60 ಕ್ಕಿಂತ ಹೆಚ್ಚು ಚಿತ್ರ ಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿದ ಮೊದಲ ಚಿತ್ರ

ಮುಂಗಾರು ಮಳೆ

2006 ರಲ್ಲಿ ತೆರೆಕಂಡ ಚಿತ್ರ .  ಗಣೇಶ್ ಮತ್ತು ಪೂಜಾ ಗಾಂಧಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ . ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಮುಂಗಾರು ಮಳೆ ಚಿತ್ರ ಕನ್ನಡಕ್ಕೆ ಹೊಸ ರೋಮ್ಯಾಂಟಿಕ್ ನಟನನ್ನು ನೀಡಿತು. 2 ಕೋಟಿ ಬಜಟ್ ನಲ್ಲಿ ತಯಾರಾದ ಈ ಚಿತ್ರ 865 ದಿನಗಳಿಗಿಂತ ಹೆಚ್ಚು ಕಾಲ ಪ್ರದರ್ಶನ ಕಂಡು 75 ಕೋಟಿ ಗಳಿಸಿತು.

ಮಿಲನ

2007 ರಲ್ಲಿ ತೆರೆ ಕಂಡ ಚಿತ್ರಾ . ಪುನೀತ್ ರಾಜಕುಮಾರ್ ಹಾಗು ಪಾರ್ವತಿ ಮೆನನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ . ಪುನೀತ್ ರಾಜಕುಮಾರ್ ನಾಯಕನಾಗಿ ನಟಿಸಿದ ಮಿಲನ ಚಿತ್ರ 50 ಚಿತ್ರಮಂದಿರಗಳಲ್ಲಿ ಶತದಿನೋತ್ಸವ, 15 ಚಿತ್ರಮಂದಿರಗಳಲ್ಲಿ 200 ದಿನ ಪ್ರದರ್ಶನ ಕಂಡಿತು. ಮಲ್ಟಿಪ್ಲೆಕ್ಸ್ ನಲ್ಲಿ 600 ದಿನ ಪ್ರದರ್ಶನ ಕಂಡ ಏಕೈಕ ಚಿತ್ರವಾಗಿ ದಾಖಲಾಗಿದೆ.

ಇದಿಷ್ಟು ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies

ಯುಟ್ಯೂಬ್ ನಲ್ಲೂ ನೋಡಿ – ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies

ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು - Top 20 Longest Running Kannada Best Movies

ಯುಟ್ಯೂಬ್ ನಲ್ಲೂ ನೋಡಿ – ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನಗಳು ಪ್ರದರ್ಶನ ಕಂಡು ಧಾಖಲೆ ಬರೆದ ಕನ್ನಡ ಸಿನಿಮಾಗಳು – Top 20 Longest Running Kannada Best Movies

Leave a Comment