V. RAVICHANDRAN 100 DAYS KANNADA MOVIES
ರೋಮ್ಯಾಂಟಿಕ್, ಕ್ರೇಜಿ ಸ್ಟಾರ್ ಎಂದೇ ಖ್ಯಾತಿ ಪಡೆದ ನಮ್ಮ ನಿಮ್ಮೆಲ್ಲರ ಪ್ರೀತಿಯ ರವಿಚಂದ್ರನ್ ರವರು ಅಭಿನಯಿಸಿ ಹೆಚ್ಚು success ಕಂಡ ಚಿತ್ರಗಳ ಬಗ್ಗೆ ತಿಳ್ಕೊಳೋಣ ಬನ್ನಿ.
ಪ್ರೇಮಲೋಕ
ಇದು 80 ರ ದಶಕದ ರವಿಚಂದ್ರನ್ ಮತ್ತು ಜೂಹಿ Chawla ರವರ ಒಂದು ರೋಮ್ಯಾಂಟಿಕ್, ಮ್ಯೂಸಿಕಲ್ ಚಿತ್ರ. ಈ ಚಿತ್ರ ಒಂದು ವರ್ಷ ಕಾಲ ಪ್ರದರ್ಶನಗೊಂಡು ಪಡ್ಡೆ ಹುಡುಗರ ನಿದ್ದೇ ಗೆಡಿಸಿತ್ತು. ಈ ಚಿತ್ರವನ್ನ ರವಿಚಂದ್ರನ್ ರವರು ರಚಿಸಿ, ನಟಿಸಿ, ಮತ್ತು ನಿರ್ದೇಶನ ಮಾಡಿದ ಚೋಚ್ಚಲ ಚಿತ್ರ. ಕನ್ನಡದಲ್ಲಿ ಪ್ರೇಮಲೋಕ ಮತ್ತು ತಮಿಳಿನಲ್ಲಿ “ಪರುವ ರಾಗಮ್” ಈಗೆ ದ್ವಿಭಾಷೆಯಲ್ಲಿ 1987 ರಲ್ಲಿ ತೆರೆ ಕಂಡಂತಹ ಚಿತ್ರ.
ಹಂಸಲೇಖ ರವರ ಸಾಹಿತ್ಯ ಮತ್ತು ಸಂಗೀತಾ ವೆರಡು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು. ಈ ಚಿತ್ರದ ಹಾಡುಗಳೆಲ್ಲ ಸೂಪರ್ ಹಿಟ್ ಆಗಿದ್ದವು.
ರಣಧೀರ
ರವಿಚಂದ್ರನ್ ಮತ್ತು ಖುಷ್ಬೂ ಮುಖ್ಯ ಪಾತ್ರ ದಲ್ಲಿ ತೆರೆ ಕಂಡು 25 ವಾರಗಳ ಪ್ರದರ್ಶನ ಮಾಡಿದ ಚಿತ್ರ. ಈ ಚಿತ್ರವನ್ನ ರವಿಚಂದ್ರನ್ ರವರೇ ರಚಿಸಿ, ನಿರ್ದೇಶನ ಮಾಡಿ 1988 ರಲ್ಲಿ ತೆರೆ ತಂದು ಸೂಪರ್ ಹಿಟ್ ಚಿತ್ರವೆಂದೇ ಹೆಸರು ಮಾಡಿತು.. ಇದು ರವಿಚಂದ್ರನ್ ರವರ ಹೋಂ ಬ್ಯಾನರ್ ನಲ್ಲಿ ತಯಾರಾದ ಚಿತ್ರ. ಈ ಚಿತ್ರ ಹಿಂದಿಯಾ ” ಹೀರೋ” ಸಿನಿಮಾದ ರಿಮೇಕ್. ಹಂಸಲೇಖ ರವರು ಈ ಚಿತ್ರಕ್ಕೆ ಸಾಹಿತ್ಯ, ಸಂಗೀತ ನೀಡಿದ್ದಾರೆ.
ಅಂಜದಗಂಡು
1988 ರಲ್ಲಿ ಮತ್ತೆ ರವಿಚಂದ್ರನ್ ಮತ್ತು ಖುಷ್ಬೂ ಅಭಿನಯದ ಚಿತ್ರ. B N ಗಂಗಾಧರ್ ರವರ ನಿರ್ಮಾಣದಲ್ಲಿ ತೆರೆ ಕಂಡು 25 ವಾರಗಳ ಪ್ರದರ್ಶನ ಮಾಡಿದ ಚಿತ್ರ. ಈ ಚಿತ್ರವನ್ನ ರೇಣುಕಾ ಶರ್ಮ ರವರು ನಿರ್ದೇಶನ ಮಾಡಿದ್ದಾರೆ. ಇದು ತಮಿಳಿನ “ತಂಬಿಕು ಎಂಥ ಊರು” ಚಿತ್ರದ ರಿಮೇಕ್. ಮತ್ತೆ ಹಂಸಲೇಖ ರವರ ಸಂಗೀತ ಎಲ್ಲರ ಮನಗೆದ್ದು, ಪ್ರೇಕ್ಷಕರು ಹಾಡುಗಳ Cassete ಖರೀದಿಯಲ್ಲೇ ಹೆಚ್ಚು ಹೆಸರು ಮಾಡಿ, Blockbuster ಎಂದೇ ಖ್ಯಾತಿ ಪಡೆಯಿತು.
V. RAVICHANDRAN 100 DAYS KANNADA MOVIES
ಯುದ್ಧಕಾಂಡ
C ರಾಜಕುಮಾರ್ ನಿರ್ಮಾಣದಲ್ಲಿ ರವಿಚಂದ್ರನ್ ಅಭಿನಯದಲ್ಲಿ ಮೂಡಿಬಂದ ಚಿತ್ರ. ಕೆ ವಿ ರಾಜು ರವರ ನಿರ್ದೇಶನದಲ್ಲಿ ಮೊದಲ ಬಾರಿ ಕನ್ನಡದಲ್ಲಿ “ಪೂನಂ ಧಿಲ್ಲೋನ್” ನಟಿಸಿದ ಚಿತ್ರ. 1989 ರಲ್ಲಿ ತೆರೆ ಕಂಡು ಬೆಂಗಳೂರು ಕಪಾಲಿ ಚಿತ್ರಮಂದಿರದಲ್ಲಿ 16 ವಾರಗಳ ಪ್ರದರ್ಶನ ಕಂಡು ಆ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರವೆಂದೇ ಹೆಸರು ಮಾಡಿತು. ಇದು ಹಿಂದಿಯಾ
“Meri Jung” ಸಿನಿಮಾದ ರಿಮೇಕ್. ಭಾರತಿ ವಿಷ್ಣುವರ್ಧನ್ ರವರು ಈ ಚಿತ್ರದಲ್ಲಿ ರವಿಚಂದ್ರನ್ ರವರ ತಾಯಿಯಾಗಿ ನಟಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರ ೧೦೦ ದಿನ ಪ್ರದರ್ಶನ ಕಂಡ ಕನ್ನಡ ಸಿನಿಮಾಗಳು Power star Puneeth Rajkumar 100 DAYS Movies
ರಾಮಾಚಾರಿ
ರವಿಚಂದ್ರನ್ ಮತ್ತು ಮಾಲಾಶ್ರೀ ಮುಖ್ಯ ಪಾತ್ರದಲ್ಲಿ ತೆರೆ ಕಂಡು 100 ದಿನಗಳ ಪ್ರದರ್ಶನ ಮಾಡಿ, ಅಲವು ಪ್ರಶಸ್ತಿಗೆ ಪಾತ್ರವಾಯಿತು.
ಈ ಚಿತ್ರವನ್ನ D ರಾಜೇಂದ್ರ ಬಾಬು ರವರು ನಿರ್ದೇಶನ ಮಾಡಿ 1991 ರಲ್ಲಿ ತೆರೆಗೆ ತಂದು ಸೂಪರ್ ಹಿಟ್ ಆದ ಚಿತ್ರ. ಇದು ರವಿಚಂದ್ರನ್ ರವರ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾದ ಚಿತ್ರ. ಇದು ತಮಿಳಿನ “ಚಿನ್ನ ತಂಬಿ” ಸಿನಿಮಾದ ರಿಮೇಕ್. ಹಂಸಲೇಖ ರವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಹಳ್ಳಿಮೇಷ್ಟ್ರು
1992 ರಲ್ಲಿ ರವಿಚಂದ್ರನ್ ಮತ್ತು ಬಿಂದಿಯಾ ಅಭಿನಯದ ರೋಮ್ಯಾಂಟಿಕ್, ಕಾಮಿಡಿ ಚಿತ್ರ. N ವೀರಸ್ವಾಮಿ ರವರ ನಿರ್ಮಾಣದಲ್ಲಿ ತೆರೆ ಕಂಡು 100 ದಿನಗಳ ಪ್ರದರ್ಶನ ಮಾಡಿದ ಚಿತ್ರ. ಈ ಚಿತ್ರವನ್ನ ಮೋಹನ್ – ಮಂಜು ರವರು ನಿರ್ದೇಶನ ಮಾಡಿದ್ದಾರೆ. ಇದು ತಮಿಳಿನ “ಮುಂಧಾನ್ ಐ ಮುಡಿಚ್ಚು” ಚಿತ್ರದ ರಿಮೇಕ್. ಮತ್ತೆ ಹಂಸಲೇಖ ರವರ ಸಂಗೀತ ಎಲ್ಲರ ಮನಗೆದ್ದು, ಪಡ್ಡೆ ಹುಡುಗರ ಅಚ್ಚು ಮೆಚ್ಚಿನ ಸಂಗೀತ ನಿರ್ದೇಶಕರಾದರು.
ಶ್ರೀ ರಾಮಚಂದ್ರ
P ಧನರಾಜ್ ನಿರ್ಮಾಣದಲ್ಲಿ ರವಿಚಂದ್ರನ್ ಮತ್ತು ಮೋಹಿನಿ ಮುಖ್ಯ ಪಾತ್ರದಲ್ಲಿ ತೆರೆ ಕಂಡ ರೋಮ್ಯಾಂಟಿಕ್, ಡ್ರಾಮಾ, ಕಾಮಿಡಿ ಚಿತ್ರ. ಇದು ತಮಿಳಿನ ” ಕಲ್ಯಾಣರಾಮನ್ ” ಸಿನಿಮಾದ ರಿಮೇಕ್. ಈ ಚಿತ್ರವನ್ನ D ರಾಜೇಂದ್ರ ಬಾಬು ರವರು ನಿರ್ದೇಶನ ಮಾಡಿ 1992 ರಲ್ಲಿ ತೆರೆಗೆ ತಂದು ಸೂಪರ್ ಹಿಟ್ ಆದ ಚಿತ್ರ. ಹಂಸಲೇಖ ರವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದ ಆಡಿಯೋ ಸೇಲ್ಸ್ ಕೂಡ ಅತಿ ಹೆಚ್ಚು ಹೆಸರು ಮಾಡಿತು.
ಗಡಿಬಿಡಿ ಗಂಡ
K ಕೃಷ್ಣ ಮೋಹನ್ ರಾವ್ ನಿರ್ಮಾಣದಲ್ಲಿ ರವಿಚಂದ್ರನ್, ರಮ್ಯಕೃಷ್ಣ ಮತ್ತು ರೋಜಾ ರವರ ಮುಖ್ಯ ಪಾತ್ರದಲ್ಲಿ ತೆರೆ ಕಂಡು 100 ದಿನಗಳ ಪ್ರದರ್ಶನ ಮಾಡಿದ ಚಿತ್ರ.
ಈ ಚಿತ್ರವನ್ನ V S ರೆಡ್ಡಿ ರವರು ನಿರ್ದೇಶನ ಮಾಡಿ, 1993 ರಲ್ಲಿ ತೆರೆಗೆ ಬಂದು ಸೂಪರ್ ಹಿಟ್ ಆಯಿತು. ಇದು ತೆಲುಗಿನ “ಅಲ್ಲರೀ ಮೊಗುಡು” ಸಿನಿಮಾದ ರಿಮೇಕ್. ಹಂಸಲೇಖ ರವರು ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ.
ಅಣ್ಣಯ್ಯ
K ಭಾಗ್ಯರಾಜ್ ರವರ ನಿರ್ಮಾಣದಲ್ಲಿ ರವಿಚಂದ್ರನ್ ಮತ್ತು ಮಧೂ ರವರ ಮುಖ್ಯ ಭೂಮಿಕೆಯಲ್ಲಿ ತೆರೆ ಕಂಡು 100 ದಿನಗಳ ಪ್ರದರ್ಶನ ಮಾಡಿದ ಚಿತ್ರ.
ಈ ಚಿತ್ರವನ್ನ D ರಾಜೇಂದ್ರ ಬಾಬು ರವರು ನಿರ್ದೇಶನ ಮಾಡಿ 1993 ರಲ್ಲಿ ತೆರೆಗೆ ತಂದು ಸೂಪರ್ ಹಿಟ್ ಎಂದೇ ಖ್ಯಾತಿ ಪಡೆಯಿತು. ಇದು ತಮಿಳಿನ “ಎಂಗ ಚಿನ್ನ ರಸ” ಸಿನಿಮಾದ ರಿಮೇಕ್. ಇಲ್ಲೂ ಕೂಡ ಹಂಸಲೇಖ ರವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
V. RAVICHANDRAN 100 DAYS KANNADA MOVIES
ಡಿ ಬಾಸ್ ದರ್ಶನ್ ಅವರ 100 ದಿನ ಪ್ರದರ್ಶನ ಕಂಡ ಮಾಸ್ ಸಿನಿಮಾಗಳು Challenging Star Darshan 100 Days Movies
ಮನೆದೇವ್ರು
ರವಿಚಂದ್ರನ್ ಮತ್ತು ಸುಧಾರಾಣಿ ಯವರ ಮೊದಲ ಜೋಡಿಯಲ್ಲಿ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ Blockbuster ಎಂದೇ ಹೆಸರು ಮಾಡಿದ ಚಿತ್ರ. ಈ ಚಿತ್ರವನ್ನ ರವಿಚಂದ್ರನ್ ರವರೇ ನಿರ್ದೇಶನ ಮಾಡಿ, 1993 ರಲ್ಲಿ ತೆರೆ ಕಂಡಂತಹ ಚಿತ್ರ. ಈ ಚಿತ್ರಕ್ಕೆ ನಿರ್ಮಾಣದ ಹೊರೆ ಒತ್ತವರು ಮೀನಾ ಸುಜಾತ ರವರು. ಇದು ತಮಿಳಿನ ” ಮೌನ ಗೀತಾಂಗಳ್” ಸಿನಿಮಾದ ರಿಮೇಕ್. ಹಂಸಲೇಖ ರವರು ಈ ಚಿತ್ರಕ್ಕೆ ಸಾಹಿತ್ಯ, ಸಂಗೀತ ನೀಡಿದ್ದಾರೆ.
ರಸಿಕ
Rockline ವೆಂಕಟೇಶ್ ರವರ ನಿರ್ಮಾಣದಲ್ಲಿ ರವಿಚಂದ್ರನ್, ಭಾನುಪ್ರಿಯಾ ಮತ್ತು ಶ್ರುತಿ ರವರ ಮುಖ್ಯ ಭೂಮಿಕೆಯಲ್ಲಿ ತೆರೆ ಕಂಡು ಮೈಸೂರಿನಲ್ಲಿ 100 ದಿನಗಳ ಪ್ರದರ್ಶನ ಮಾಡಿದ ಚಿತ್ರ. ಈ ಚಿತ್ರವನ್ನ ದ್ವಾರಕೇಶ್ ರವರು ನಿರ್ದೇಶನ ಮಾಡಿ 1994 ರಲ್ಲಿ ತೆರೆಗೆ ತಂದು Musical ಸೂಪರ್ ಹಿಟ್ ಎಂದೇ ಖ್ಯಾತಿ ಪಡೆಯಿತು. ಇದು ತಮಿಳಿನ ” Senthamizh Pattu ” ಸಿನಿಮಾದ ರಿಮೇಕ್. ಇಲ್ಲೂ ಕೂಡ ಹಂಸಲೇಖ ರವರು ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ.
ಪುಟ್ನಂಜ
ರವಿಚಂದ್ರನ್ ರವರೇ ನಿರ್ದೇಶಿಸಿ, ನಿರ್ಮಿಸಿದ ಚಿತ್ರ. ಮೀನಾ ರವರು ಮೊದಲ ಬಾರಿ ಕನ್ನಡದಲ್ಲಿ ರವಿಚಂದ್ರನ್ ರವರ ಜೋಡಿಯಾಗಿ ನಟಿಸಿದ ಚಿತ್ರ. 1995 ರಲ್ಲಿ ತೆರೆ ಕಂಡು 25 ವಾರಗಳ ಪ್ರದರ್ಶನ ಮಾಡಿ Musical, Drama ಸೂಪರ್ ಹಿಟ್ ಎಂದೇ ಖ್ಯಾತಿ ಪಡೆಯಿತು. ಇದು ತಮಿಳಿನ ” ಪಟ್ಟಿಕಡ ಪಟ್ಟಣಮ್ ” ಸಿನಿಮಾದ ಪ್ರೇರಿತ ಚಿತ್ರ. ಹಂಸಲೇಖ ರವರು ಈ ಚಿತ್ರಕ್ಕೆ ಸಾಹಿತ್ಯ, ಸಂಗೀತ ನೀಡಿ ಮತ್ತೊಮ್ಮೆ ಸಿನಿ ಪ್ರಿಯರ ಗಮನ ಸೆಳೆದರು. ಉಮಾಶ್ರೀ ಯವರಿಗೆ Film Fare Award ನಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ತಂದು ಕೊಟ್ಟ ಚಿತ್ರ.
ಸಿಪಾಯಿ
ಮತ್ತೊಮ್ಮೆ ರವಿಚಂದ್ರನ್ ರವರೇ ನಿರ್ದೇಶಿಸಿ, ನಿರ್ಮಿಸಿದ ಚಿತ್ರ. ಸೌಂದರ್ಯ ರವರು ಮೊದಲ ಬಾರಿ ರವಿಚಂದ್ರನ್ ರವರ ಜೋಡಿಯಾಗಿ ನಟಿಸಿದ ಚಿತ್ರ. 1996 ರಲ್ಲಿ ತೆರೆ ಕಂಡು 25 ವಾರಗಳ ಪ್ರದರ್ಶನ ಮಾಡಿ Musical ಹಿಟ್ ಚಿತ್ರ ಎಂದೇ ಖ್ಯಾತಿ ಪಡೆಯಿತು. ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಯವರು ಕೂಡ ನಟಿಸಿದ್ದಾರೆ. ಹಂಸಲೇಖ ರವರು ಈ ಚಿತ್ರಕ್ಕೆ ಸಾಹಿತ್ಯ, ಸಂಗೀತ ನೀಡಿದ್ದಾರೆ. ಆಡಿಯೋ ಕ್ಯಾಸೆಟ್ಸ್ Sales ನಲ್ಲೂ ರೆಕಾರ್ಡ್ ಮಾಡಿದ ಚಿತ್ರ.
ಯಾರೇ ನೀನು ಚೆಲುವೆ
Rockline ವೆಂಕಟೇಶ್ ರವರ ನಿರ್ಮಾಣದಲ್ಲಿ ರವಿಚಂದ್ರನ್ ಮತ್ತು ಸಂಗೀತ ರವರ ಮುಖ್ಯ ಭೂಮಿಕೆಯಲ್ಲಿ ತೆರೆ ಕಂಡು 35 ವಾರಗಳ ಪ್ರದರ್ಶನ ಮಾಡಿದ ರೋಮ್ಯಾಂಟಿಕ್, ಡ್ರಾಮಾ ಚಿತ್ರ.
ಈ ಚಿತ್ರವನ್ನ D ರಾಜೇಂದ್ರ ಬಾಬು ರವರು ನಿರ್ದೇಶನ ಮಾಡಿ 1998 ರಲ್ಲಿ ತೆರೆಗೆ ತಂದು ಬಾಕ್ಸ್ ಆಫೀಸ್ ನಲ್ಲಿ ಹೆಸರು ಮಾಡಿದ ಚಿತ್ರ. ಇದು ತಮಿಳಿನ Blockbuster “Kadhal Kottai” ಸಿನಿಮಾದ ರಿಮೇಕ್. ಈ ಚಿತ್ರದ ಸಂಗೀತ ನಿರ್ದೇಶನಕ್ಕೆ ಹಂಸಲೇಖ ರವರಿಗೆ Filmfare Award ಪ್ರಶಸ್ತಿ ಲಭಿಸಿತು.
V. RAVICHANDRAN 100 DAYS KANNADA MOVIES
ಮಾಂಗಲ್ಯಂ ತಂತುನಾನೇನ
ಅಲ್ಲು ಅರವಿಂದ್ ನಿರ್ಮಾಣದಲ್ಲಿ ರವಿಚಂದ್ರನ್, ರಮ್ಯಕೃಷ್ಣ ಮತ್ತು S P ಬಾಲಸುಬ್ರಮಣ್ಯಂ ರವರ ಮುಖ್ಯ ಪಾತ್ರದಲ್ಲಿ ತೆರೆ ಕಂಡ ಒಂದು ರೋಮ್ಯಾಂಟಿಕ್, ಡ್ರಾಮಾ ಚಿತ್ರ. ಈ ಚಿತ್ರವನ್ನ V S ರೆಡ್ಡಿ ರವರು ನಿರ್ದೇಶನ ಮಾಡಿ, 1998 ರಲ್ಲಿ ತೆರೆಗೆ ಬಂದು 100 ದಿನಗಳ ಪ್ರದರ್ಶನ ಮಾಡಿದ ಚಿತ್ರ. ಇದು ತೆಲುಗಿನ “ಪವಿತ್ರ ಬಂದಂ” ಸಿನಿಮಾದ ರಿಮೇಕ್.
V ಮನೋಹರ್ ರವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಪ್ರೀತ್ಸೋದ್ ತಪ್ಪಾ
Rockline ವೆಂಕಟೇಶ್ ರವರ ನಿರ್ಮಾಣದಲ್ಲಿ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಯವರ ಮುಖ್ಯ ಭೂಮಿಕೆಯಲ್ಲಿ ತೆರೆ ಕಂಡು ಮ್ಯೂಸಿಕಲ್ ಸೂಪರ್ ಹಿಟ್ ಸಿನಿಮಾ ಎಂದು ಹೆಸರು ಮಾಡಿತು. ಈ ಚಿತ್ರವನ್ನ ರವಿಚಂದ್ರನ್ ರವರು ನಿರ್ದೇಶನ ಮಾಡಿ 1998 ರಲ್ಲಿ ತೆರೆಗೆ ತಂದರು. ಇದು ತೆಲುಗಿನ Blockbuster “Ninne Pelladata” ಸಿನಿಮಾದ ರಿಮೇಕ್. ಹಂಸಲೇಖ ರವರು ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ.
ಯೌಟ್ಯೂಬ್ ನಲ್ಲಿಯೂ ನೋಡಿ V. RAVICHANDRAN 100 DAYS KANNADA MOVIES
ನಾನು ನನ್ನ ಹೆಂಡ್ತೀರು
ರವಿಚಂದ್ರನ್, ಸೌಂದರ್ಯ ಮತ್ತು ಪ್ರೇಮ ರವರ ಜೋಡಿಯಲ್ಲಿ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಹೆಸರು ಮಾಡಿದ ಒಂದೊಳ್ಳೆ ರೋಮ್ಯಾಂಟಿಕ್, ಕಾಮಿಡಿ ಚಿತ್ರ. ಈ ಚಿತ್ರವನ್ನ V S ರೆಡ್ಡಿ ರವರು ನಿರ್ದೇಶನ ಮಾಡಿ, 1999 ರಲ್ಲಿ ತೆರೆಗೆ ತಂದರು. ಈ ಚಿತ್ರವೂ ದಾವಣಗೆರೆ ಯಲ್ಲಿ ಶತದಿನೋತ್ಸವ ಆಚರಿಸಿತು. ಈ ಚಿತ್ರಕ್ಕೆ ರವಿಚಂದ್ರನ್ ರವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಓ ನನ್ನ ನಲ್ಲೆ
ಮತ್ತೊಮ್ಮೆ ರವಿಚಂದ್ರನ್ ರವರೇ ರಚಿಸಿ, ನಿರ್ದೇಶಿಸಿದ ರೋಮ್ಯಾಂಟಿಕ್ ಮ್ಯೂಸಿಕಲ್ ಚಿತ್ರ. ಇಶಾ ಕೊಪ್ಪಿಕರ್ ರವರು ಮೊದಲ ಬಾರಿ ಕನ್ನಡದಲ್ಲಿ ರವಿಚಂದ್ರನ್ ರವರ ಜೋಡಿಯಾಗಿ ನಟಿಸಿದ ಚಿತ್ರ. 2000 ರಲ್ಲಿ ತೆರೆ ಕಂಡು Musical ಹಿಟ್ ಮತ್ತು ಬಾಕ್ಸ್ ಆಫೀಸ್ ನಲ್ಲಿ Blockbuster ಎಂದು ಹೆಸರು ಮಾಡಿತು. ರವಿಚಂದ್ರನ್ ರವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದು ತೆಲುಗಿನ Blockbuster ” ತುಲ್ಲಾದ ಮನಮುಂ ತುಲ್ಲುಮ್ ” ಸಿನಿಮಾದ ರಿಮೇಕ್.
ಕನಸುಗಾರ
ಸಾ ರಾ ಗೋವಿಂದ್ ರವರ ನಿರ್ಮಾಣದಲ್ಲಿ ರವಿಚಂದ್ರನ್ ಮತ್ತು ಪ್ರೇಮ ರವರ ಮುಖ್ಯ ಭೂಮಿಕೆಯಲ್ಲಿ ತೆರೆ ಕಂಡಂತಹ ರೋಮ್ಯಾಂಟಿಕ್, ಡ್ರಾಮಾ ಚಿತ್ರ.
ಈ ಚಿತ್ರವನ್ನ ಕರಣ್ ರವರು ನಿರ್ದೇಶನ ಮಾಡಿ, 2001 ರಲ್ಲಿ ತೆರೆಗೆ ಬಂದು ಬಾಕ್ಸ್ ಆಫೀಸ್ ನಲ್ಲಿ ಹೆಸರು ಮಾಡಿದ ಚಿತ್ರ. ಇದು ತಮಿಳಿನ Blockbuster “ಉನ್ನಿದತಿಲ್ ಎನ್ನೈ ಕೊಡುತೇನ್” ಸಿನಿಮಾದ ರಿಮೇಕ್. ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದವರು ರಾಜೇಶ್ ರಾಮನಾಥ್. ಪ್ರೇಮ ರವರಿಗೆ ಫಿಲ್ಮ್ಫಾರೆ ಅವಾರ್ಡ್ ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ತಂದು ಕೊಟ್ಟ ಚಿತ್ರವಿದು.
V. RAVICHANDRAN 100 DAYS KANNADA MOVIES
ಮಲ್ಲ
ರವಿಚಂದ್ರನ್ ರವರೇ ರಚಿಸಿ, ನಿರ್ದೇಶಿಸಿ, ಸಾಹಿತ್ಯ ಬರೆದು, ಸಂಗೀತ ನಿರ್ದೇಶನವನ್ನು ಕೂಡ ಮಾಡಿದ ಒಂದೊಳ್ಳೆ ರೋಮ್ಯಾಂಟಿಕ್,ಆಕ್ಷನ್, ಡ್ರಾಮಾ ಚಿತ್ರ. ಪ್ರಿಯಾಂಕಾ ರವರು ಮೊದಲ ಬಾರಿ ರವಿಚಂದ್ರನ್ ರವರ ಜೋಡಿಯಾಗಿ ನಟಿಸಿ, 2004 ರಲ್ಲಿ ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲೂ ಸದ್ದು ಮಾಡಿದ ಚಿತ್ರ. ರಾಮು ರವರು ಮೊದಲ ಬಾರಿ ರವಿಚಂದ್ರನ್ ರವರ ಜೊತೆ ನಿರ್ಮಾಣ ಮಾಡಿದ ಚಿತ್ರ. ಮೋಹನ್ ಕುಮಾರ್ ಮತ್ತು ಉಮಾಶ್ರೀ ಯವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ದೃಶ್ಯ
E4 Entertainment ನಿರ್ಮಾಣದಲ್ಲಿ ರವಿಚಂದ್ರನ್ ಮತ್ತು ನವ್ಯ ನೈರ್ ಯವರ ಮುಖ್ಯ ಭೂಮಿಕೆಯಲ್ಲಿ ತೆರೆ ಕಂಡು Commercial ಸೂಪರ್ ಹಿಟ್ ಸಿನಿಮಾ ಎಂದು ಹೆಸರು ಮಾಡಿತು. 2014 ರಲ್ಲಿ ಈ ಚಿತ್ರವನ್ನ P ವಾಸು ರವರು ನಿರ್ದೇಶನದಲ್ಲಿ 100 ದಿನಗಳ ಪ್ರದರ್ಶನ ಮಾಡಿದ ಥ್ರಿಲ್ಲರ್, ಡ್ರಾಮಾ ಸಿನಿಮಾ. ಇದು ಮಲಯಾಳಂನ “Drishyam” ಸಿನಿಮಾದ ರಿಮೇಕ್. ಇಳಯರಾಜ ರವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಚ್ಚುತ್ ಕುಮಾರ್ ರವರಿಗೆ Film Fare Award ನಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ತಂದು ಕೊಟ್ಟ ಚಿತ್ರ.
V. RAVICHANDRAN 100 DAYS KANNADA MOVIES