Images Credits - Google
ಬಾಲಕೃಷ್ಣ ರಾಜಕುಮಾರ್ , ವಿಷ್ಣುವರ್ಧನ್ , ಕಾಲದಲ್ಲಿ ಮಿಂಚಿದ ಬಾಲಣ್ಣ ಕೇಳಿಸದೇ ಇದ್ದರೂ ಸಹನಟರ ಹಾವಭಾವ ನೋಡಿ ನಟಿಸುತ್ತಿದ್ದ ಬಾಲಣ್ಣನವರು ಕಪ್ಪು ಬಿಳುಪಿನ ಹಲವು ಚಿತ್ರಗಳಲ್ಲಿ ಖಳನಾಯಕರಾಗಿ ನಟಿಸಿದ್ದಾರೆ. ಕನ್ನಡ ಚಿತ್ರಗಳ ಚಿತ್ರೀಕರಣಕ್ಕಾಗಿ ತಮ್ಮೆಲ್ಲ ಆಸ್ತಿ ಮಾರಿ ಅಭಿಮಾನ್ ಸ್ಟುಡಿಯೋ ಕಟ್ಟಿದರು.
Images Credits - Google
ವಜ್ರಮುನಿ ಪುಟ್ಟನ ಕಣಗಾಲ್ ಅವರ ನಿರ್ದೇಶನದ ಮಲ್ಲಮನ ಪವಾಡ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ವಜ್ರಮುನಿ ಅವರು ತನ್ನ ರೌದ್ರ ನಟನೆ ಮತ್ತು ಕಂಚಿನ ಕಂಠದಿಂದ ಪ್ರೇಕ್ಷಕರ ಎದೆಯಲ್ಲಿ ನಡುಕ ಹುಟ್ಟಿಸಿದರು.
Images Credits - Google
ಎಂ ಪಿ ಶಂಕರ್ ಎಂ.ಪಿ.ಶಂಕರ್ ಕನ್ನಡದ ಪ್ರಸಿದ್ಧ ನಟ, ನಿರ್ದೇಶಕ ಮತ್ತು ಚಿತ್ರ ನಿರ್ಮಾಪಕರಾಗಿದ್ದರು . ಮೂಲತಃ ಕುಸ್ತಿಪಟುವಾಗಿ ಮೈಸೂರಿನ ದಸರಾ ಸ್ಪರ್ದೆಗಳಲ್ಲಿ ಭಾಗವಹಿಸುತ್ತಿದ್ದ ಇವರು ನಂತರ ಚಿತ್ರರಂಗಕ್ಕೆ ಬಂದು ನಟನಾಗಿ ಮತ್ತು ನಿರ್ಮಾಪಕನಾಗಿ ಪ್ರಸಿದ್ದರಾದರು.
Images Credits - Google
ಆರ್ ಏನ್ ಸುದರ್ಶನ್ 1961 ರಲ್ಲಿ ತೆರೆಕಂಡ ವಿಜಯನಗರದ ವೀರಪುತ್ರ ಚಿತ್ರದಲ್ಲಿ ನಾಯಕನಾಗಿ ಸಿನಿಪಯಣ ಆರಂಭಿಸಿದ ಇವರು ನಂತರ ಹಲವು ಚಿತ್ರಗಳಲ್ಲಿ ಖಳನಾಗಿ ಮಿಂಚಿದರು. ಕನ್ನಡ ಮಾತ್ರವಲ್ಲದೇ ತಮಿಳು,ತೆಲಗು, ಹಿಂದಿ ಮತ್ತು ಮಲಯಾಳಂ ಸೇರಿ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
Images Credits - Google
ಶಕ್ತಿ ಪ್ರಸಾದ್ ಶಕ್ತಿಪ್ರಸಾದ್ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕ ಮತ್ತು ಪೋಷಕ ನಟನಾಗಿ ಮಿಂಚಿದರು. ಪುತ್ರ ಅರ್ಜುನ್ ಸರ್ಜಾ ಮತ್ತು ಮೊಮ್ಮಕ್ಕಳಾದ ಧ್ರುವ ಸರ್ಜಾ ಮತ್ತು ಐಶ್ವರ್ಯ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
Images Credits - Google
ತೂಗುದೀಪ ಶ್ರೀನಿವಾಸ್ 1966 ರಲ್ಲಿ ತೆರೆಕಂಡ `ತೂಗುದೀಪ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಶ್ರೀನಿವಾಸರವರು ಮುಂದೆ ಕನ್ನಡದ ಪ್ರಖ್ಯಾತ ಖಳನಟರಾದರು. ಹಲವಾರು ಚಿತ್ರಗಳಲ್ಲಿ ವಜ್ರಮುನಿ, ತೂಗುದೀಪ, ದೊಡ್ಡಣ್ಣ ಜೋಡಿ ಖಳನಾಯಕರಾಗಿ ಮಿಂಚುತ್ತಿತ್ತು. ಇವರ ಹಿರಿಯ ಪುತ್ರರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕನ್ನಡದ ಟಾಪ್ ನಟ ಮತ್ತು ದಿನಕರ್ ತೂಗುದೀಪ ಕನ್ನಡದ ನಿರ್ದೇಶಕ .
Images Credits - Google
ಟೈಗರ್ ಪ್ರಭಾಕರ್ ವಿಶಿಷ್ಟ ಕಂಗ್ಲಿಷ್ ಭಾಷೆಯಿಂದ ಅಪಾರ ಖ್ಯಾತಿ ಹೊಂದಿದ್ದ ಟೈಗರ್ ಪ್ರಭಾಕರ್ ರವರು ಕನ್ನಡ ಮಾತ್ರವಲ್ಲದೇ ತಮಿಳು, ತೆಲಗು ಮತ್ತು ಹಿಂದಿ ಚಿತ್ರಗಳಲ್ಲೂ ಕೂಡ ಖಳನಟರಾಗಿ ಮಿಂಚಿದ್ದರು. ನಂತರ ನಾಯಕನಾಗಿ ಹೆಚ್ಚು ಖ್ಯಾತಿ ಪಡೆದ ನಂತರ ಕೆಲ ಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಕೂಡ ಮಾಡಿದ್ದಾರೆ. ಇವರ ಪುತ್ರ ವಿನೋದ್ ಚಿತ್ರರಂಗದಲ್ಲಿ ನಾಯಕರಾಗಿ ಸಕ್ರಿಯವಾಗಿದ್ದಾರೆ.
Images Credits - Google
ಸುಧೀರ್ ಸುಮಾರು 200 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುಧೀರ್ ಕನ್ನಡ ಖ್ಯಾತ ಖಳನಟರೊಲ್ಲಬ್ಬರು. ಸಾಂಗ್ಲಿಯಾನ ಚಿತ್ರಗಳ ಕುಮ್ಮಿ ಪಾತ್ರ ತುಂಬಾ ಜನಪ್ರಿಯ. ಇವರ ಇಬ್ಬರು ಪುತ್ರರಾದ ನಂದಕಿಶೋರ್ ಮತ್ತು ತರುಣ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದಾರೆ.
Images Credits - Google
ಸುಂದರ್ ಕೃಷ್ಣ ಅರಸ್ ನಟನಾಗಿ ಮತ್ತು ಡಬ್ಬಿಂಗ್ ಕಲಾವಿದನಾಗಿ ಕಾರ್ಯ ನಿರ್ವಹಿಸಿದ ಇವರು ಹಲವು ಚಿತ್ರಗಳಲ್ಲಿ ಖಳನಾಯಕ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಶಂಕರ ನಾಗ್ ಜೊತೆ `ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ಬೆಳಕಿಗೆ ಬಂದರು. ಈ ಚಿತ್ರದ ನಟನೆಗಾಗಿ ರಾಜ್ಯ ಪ್ರಶಸ್ತಿ ಕೂಡ ಪಡೆದರು.
Images Credits - Google
ಧೀರೇಂದ್ರ ಗೋಪಾಲ್ ಶಿವನೇ ಶಾಂಭುಲಿಂಗ್ ಡೈಲಾಗ್ ಮೂಲಕ ಇಂದಿಗೂ ಪ್ರಸಿದ್ಧ. ಕನ್ನಡದ ಖ್ಯಾತ ಹಾಸ್ಯನಟರಾಗಿ ಗುರುತಿಸಿಕೊಂಡಿರುವ ಇವರು ತಮ್ಮ ಸಿನಿಜೀವನದ ಆರಂಭದಲ್ಲಿ ಹಲವಾರು ಚಿತ್ರಗಳಲ್ಲಿ ಖಳನ ಪಾತ್ರದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ರ ನಾಗರಹಾವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ನಂತರ ವಿಷ್ಣುರ ಸಾಹಸಸಿಂಹ ಸೇರಿದಂತೆ ಹಲವು ಚಿತ್ರಗಳಲ್ಲಿ ಖಳನಾಗಿ ಮಿಂಚಿದರು.
Images Credits - Google
ಮುಸುರಿ ಕೃಷ್ಣಮೂರ್ತಿ ತಮ್ಮ ಹಾಸ್ಯ ನಟನೆಗೆ ಪ್ರಸಿದ್ಧರಾಗಿರುವ ಮುಸುರಿ ಕೃಷ್ಣಮೂರ್ತಿಯವರು ಮೈಸೂರಿನ ಹತ್ತಿರದ ಹಳ್ಳಿಯೊಂದರ ಜಮೀನದಾರ ಕುಟುಂಬದಲ್ಲಿ ಜನಿಸಿದರು. ಅಭಿನಯದೆಡೆಗೆ ಆಸಕ್ತಿಯಿದ್ದ ಇವರು ಹಲವಾರು ಚಿತ್ರಗಳಲ್ಲಿ ಪ್ರಮುಖ ಖಳನಾಯಕರ ಸಹಾಯಕ ಪಾತ್ರಗಳಲ್ಲಿ ತಮ್ಮ ಹಾಸ್ಯ ಲೇಪಿತ ಕುಟಿಲ ಪಾತ್ರಗಳಿಂದ ಮಿಂಚಿದರು.
Images Credits - Google
ದೊಡ್ಡಣ್ಣ ಸುಮಾರು 800 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ದೊಡ್ಡಣ್ಣನವರು 90 ರ ದಶಕಕ್ಕಿಂತ ಹಿಂದೆ ಖಳನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದರು. 90 ರ ದಶಕದ ನಂತರ ಹಾಸ್ಯ ಮತ್ತು ಪೋಷಕ ಪಾತ್ರಗಳತ್ತ ಗಮನ ಹರಿಸಿದರು. ವೃತ್ತಿ ರಂಗಭೂಮಿ ಹಿನ್ನಲೆಯಿಂದ ಬಂದ ಇವರು ಚಿತ್ರರಂಗಕ್ಕೂ ಬರುವ ಮುನ್ನ ಭದ್ರಾವತಿ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
Images Credits - Google
ಮುಖ್ಯ ಮಂತ್ರಿ ಚಂದ್ರು ಹಾಸ್ಯ ನಟನೆ ಮತ್ತು ಕನ್ನಡ ಪರ ಹೋರಾಟಗಳ ಮೂಲಕ ಪ್ರಸಿದ್ಧರಾಗಿರುವ ಮುಖ್ಯಮಂತ್ರಿ ಚಂದ್ರುರವರು ಮೊದಲು ಖಳನಾಯಕನ ಪಾತ್ರ ಮಾಡುತ್ತಿದ್ದರು. ನಂತರ ಹಾಸ್ಯ ಲೇಪಿತ ಖಳನ ಪಾತ್ರದಿಂದ ಸಂಪೂರ್ಣ ಹಾಸ್ಯಕ್ಕೆ ಸರಿದರು. ವಿಧಾನ ಪರಿಷತ್ ಸದಸ್ಯನಾಗಿ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮುಖ್ಯಸ್ತನಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.
Images Credits - Google