90 ರ ದಶಕದಲ್ಲಿ ಮಿಂಚಿದ ಕನ್ನಡದ ಫೇಮಸ್ ಬಾಲ ನಟರು

Images Credits - Google

ಸುಧಾರಾಣಿ  ಆನಂದ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮುನ್ನ ಸುಧಾರಾಣಿ ಅವರು ಕನ್ನಡದ ಕಿಟ್ಟು ಪುಟ್ಟು ,ಕುಳ್ಳ-ಕುಳ್ಳಿ ಚಿತ್ರಗಳಲ್ಲಿ ಬೇಬಿ ಜಯಶ್ರೀ ಆಗಿ ಬಾಲ ನಟಿಯಾಗಿ ನಟಿಸಿದ್ದರು . 

Images Credits - Google

ಅರ್ಜುನ್ ಸರ್ಜಾ ಆಕ್ಸನ್ ಕಿಂಗ್ ಎಂದೇ ಹೆಸರಾಗಿರುವ ಅರ್ಜುನ್ ಸರ್ಜಾ ರಾಜೇಂದ್ರ ಸಿಂಗ್ ಬಾಬುರವರ ನಿರ್ದೇಶನದಲ್ಲಿ ಮೂಡಿಬಂದ ಮಕ್ಕಳ ಚಿತ್ರ ಸಿಂಹದ ಮರಿ ಸೈನ್ಯದಲ್ಲಿ ಬಾಲ ಕಲಾವಿದರಾಗಿ ನಟಿಸಿದ್ದರು. ಈ ಚಿತ್ರ 1981 ರಲ್ಲಿ ತೆರೆಕಂಡಿತ್ತು. 

Images Credits - Google

ಮಾಸ್ಟರ್ ಮಂಜುನಾಥ್  ಕರಾಟೆ ಕಿಂಗ್ ಶಂಕರನಾಗ್ ಅವರ ನಿರ್ದೇಶನದ ಮಾಲ್ಗುಡಿ ಡೇಸ್ ಸೀರಿಯಲ್ ಮೂಲಕ ಪ್ರಸಿದ್ದಿ ಆದ ಮಾಸ್ಟರ್ ಮಂಜುನಾಥ್ ಕನ್ನಡದಲ್ಲಿ ಬಾಲನಟನಾಗಿ ಸುಮಾರು 68 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಂಜನಾಥ್ ಕನ್ನಡದ ದಿಗ್ಗಜ ನಟರಾದ ವಿಷ್ಣುವರ್ಧನ್, ಶಂಕರನಾಗ್, ಅಂಬರೀಶ್, ರವಿಚಂದ್ರನ್ ಮುಂತಾದ ಕಲಾವಿದರೊಂದಿಗೆ ನಟಿಸಿದ್ದಾರೆ. ತಮ್ಮ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. 

Images Credits - Google

ಪುನೀತ್ ರಾಜಕುಮಾರ್  ಪುನೀತ್ ಅವರು ಬಾಲನಟನಾಗಿ ಸುಮಾರು 14ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಭಾಗ್ಯವಂತ, ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ ,ಬೆಟ್ಟದ ಹೂವು ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಮಾಸ್ಟರ್ ಲೋಹಿತ್ ಆಗಿ ಪ್ರಸಿದ್ದಿ ಆಗಿದ್ದರು ಬೆಟ್ಟದ ಹೂವು ಚಿತ್ರಕ್ಕಾಗಿ ಪುನೀತ್ ಅವರು ರಾಷ್ಟ್ರ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. 

Images Credits - Google

ಬೇಬಿ ಶಾಮಿಲಿ  ಬೇಬಿ ಶ್ಯಾಮಿಲಿ ದಕ್ಷಿಣದ ಭಾರತದ ನಾಲ್ಕು ಭಾಷೆಗಲಾದ ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಂ ನಲ್ಲಿ ನಟಿಸಿರುವ ಅದ್ಭುತ ನಟಿ. ಎರಡು ವರ್ಷದ ಮಗುವಾಗಿದ್ದಾಗ ನಟನೆ ಆರಂಭಿಸಿದ ಶ್ಯಾಮಿಲಿ ಕನ್ನಡದಲ್ಲಿ ವಿಷ್ಣುವರ್ಧನ್ ಹಾಗು ರೂಪಿಣಿ ಅವರ ನಟನೆಯ ಮತ್ತೇ ಹಾಡಿತು ಕೋಗಿಲೆ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಕನ್ನಡದಲ್ಲಿ 8ಕ್ಕೂ ಹೆಚ್ಚು ಸಿನೆಮಾದಲ್ಲಿ ನಟಿಸಿ ರಾಜ್ಯ ಪ್ರಶಸ್ತಿ ಕೂಡ ಪಡೆದು ಕೊಂಡಿದ್ದಾರೆ. 

Images Credits - Google

ವಿಜಯ್ ರಾಘವೇಂದ್ರ  ರಾಜಕುಮಾರ್ ಅವರ ನಟನೆಯ ಚಲಿಸುವ ಮೋಡಗಳು ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ಬಾಲ ಕಲಾವಿದನಾಗಿ ಸಿನಿಪಯಣ ಆರಂಭಿಸಿದ ವಿಜಯ್ ರಾಘವೇಂದ್ರ ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು ಚಿತ್ರಗಳ ಮೂಲಕ ಪ್ರಸಿದ್ಧಿ ಪಡೆದರು. ಇವರು ರಾಷ್ಟ್ರ ಪ್ರಶಸ್ತಿ ಕೂಡ ಪಡೆದರು. ಈಗ ವಿಜಯ್ ರಾಘವೇಂದ್ರ ನಾಯಕ ನಟ ನಿರೂಪಕ ಟಿವಿ ಷೋಗಳ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

Images Credits - Google

ಮಾಸ್ಟರ್ ಆನಂದ್ ಮಾಸ್ಟರ್ ಆನಂದ್ ರವಿಚಂದ್ರನ್ ರವರ ಕಿಂದರಿ ಜೋಗಿ ಚಿತ್ರದಿಂದ ಬಾಲನಟನಾಗಿ ಸಿನಿಪಯಣ ಆರಂಭಿಸಿದರು.ಗೌರಿ ಗಣೇಶ್ ಚಿತ್ರದಲ್ಲಿನ ನಟನೆ ಇವರಿಗೆ ರಾಜ್ಯ ಪ್ರಶಸ್ತಿ ತಂದು ಕೊಟ್ಟಿತು ಈಗ ಮಾಸ್ಟರ್ ಆನಂದ್ ಅವರು ಟಿವಿ ಷೋಗಳಿಗೆ ನಿರೊಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

Images Credits - Google

ಬೇಬಿ ಅಮೂಲ್ಯ  ಅಮೂಲ್ಯ ಎಂಟು ವರ್ಷದ ಬಾಲಕಿಯಿದ್ದಾಗ ವಿಷ್ಣುವರ್ಧನ್ ಅವರ ನಟನೆಯ ಪರ್ವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು, ನಂತರ ಬಾಲನಟಿಯಾಗಿ ಚಂದು, ಲಾಲಿ ಹಾಡು, ನಮ್ಮ ಬಸವ ಮುಂತಾದ ಹತ್ತು ಚಿತ್ರಗಳಲ್ಲಿ ನಟಿಸಿದ್ದಾರೆ.

Images Credits - Google

ಮಾಸ್ಟರ್ ಕಿಶನ್ ಕಿಶನ್ ಅವರು ನಾಲ್ಕು ವರ್ಷ ಇದ್ದಾಗಲೇ ಬಾಲನಟನಾಗಿ ಗ್ರಾಮ ದೇವತೆ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದರು  ನಂತರ ಚಂದು , ಲಲಿ ಹಾಡು , ಜೋಗಿ ಚಿತ್ರಗಳಲ್ಲಿ ಅಭಿ ನಾಯಿಸಿದ್ದಾರೆ ಮತ್ತು ಕೇರ್ of ಫುಟ್ಬಾತ್ ಚಿತ್ರವನ್ನು ನಿರ್ದೇಶಿಸಿದ್ದಾರೆ ಬಲ ನಟನಾಗಲ್ಲದೆ ಬಾಲ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ

Images Credits - Google